ನವದೆಹಲಿ: ಯುಪಿಐ ವಹಿವಾಟು ಸೇರಿದಂತೆ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಎರಡು ಹಂತದ ದೃಢೀಕರಣ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.
ಆನ್ಲೈನ್ ಮೂಲಕ ನಡೆಯುವ ಹಣಕಾಸಿನ ವಂಚನೆಗಳನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಈ ಕ್ರಮ ಜಾರಿಗೆ ತಂದಿದೆ. ಬಳಕೆದಾರರು ಈ ಎರಡು ಹಂತಗಳನ್ನು ಪೂರ್ಣಗೊಳಿಸಿದಲ್ಲಿ ಮಾತ್ರ ವಹಿವಾಟು ನಡೆಸಬಹುದಾಗಿದೆ.
ಯಾರಾದರೂ ನಿಮ್ಮ ಪಿನ್ ನೋಡಿದರೂ ಅನಧಿಕೃತ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು ಸೇರಿದಂತೆ ಪಾವತಿ ಸೇವೆ ಒದಗಿಸುವ ಪೂರೈಕೆದಾರರು ಎರಡು ಹಂತದ ದೃಢೀಕರಣ ಜಾರಿ ನಿರ್ದೇಶನ ಪಾಲಿಸುವಂತೆ ಆರ್‌ಬಿಐ ಸೂಚಿಸಿದೆ.
ಇದರಿಂದ ಬಳಕೆದಾರರು ಯುಪಿಐ ಪಿನ್ ಅಷ್ಟೇ ನಮೂದಿಸುವ ಮೂಲಕ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಒಟಿಪಿ, ಬೆರಳಚ್ಚು, ದೃಢೀಕರಣ ಅಥವಾ ಮುಖಚಹರೆ ಗುರುತಿಸುವ ಮೂಲಕ ವಹಿವಾಟು ನಡೆಸಬೇಕಿದೆ. ಅಲ್ಲದೆ ಬ್ಯಾಂಕಿಂಗ್ ಆ್ಯಪ್ ನಲ್ಲಿ ಬಳಕೆದಾರರು ಸ್ಕ್ರೀನ್ ಶಾಟ್ ಅಥವಾ ಸ್ಕ್ರೀನ್ ರೆಕಾರ್ಡ್ ಮಾಡಲು ಬರುವುದಿಲ್ಲ ಎಂದು ಹೇಳಲಾಗಿದೆ.