Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Dharwad

ಅನುಭವ ಮಂಟಪ ಸಂಘದ ಮಹಿಳಾ ಸದಸ್ಯರಿಂದ ವೈರಾಗ್ಯ ನಿಧಿ ಅಕ್ಕಮಹಾದೇವಿ ರೂಪಕ

ಧಾರವಾಡ: ಯಾಲಕ್ಕಿ ಶೆಟ್ಟರ ಕಾಲೋನಿಯ ಶಂಕರಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ  ಉತ್ಸವ ನಿಮಿತ್ಯ ಅನುಭವ ಮಂಟಪ ಸಂಘದ ಮಹಿಳಾ ಸದಸ್ಯರಿಂದ  ಕಲ್ಯಾಣ ದರ್ಶನ, ವೈರಾಗ್ಯನಿಧಿ ಅಕ್ಕಮಹಾದೇವಿ ದೃಶ್ಯ ರೂಪಕ  ನಡೆಯಿತು. 
ಡಾ. ವೀಣಾ ಬಿರಾದಾರ ಅವರು ರಚಿಸಿ, ಸಂಭಾಷಣೆ ಬರೆದು, ಮಾರ್ಗದರ್ಶನ  ಮತ್ತು ನಿರ್ದೇಶನ  ಮಾಡಿದ  ಅಕ್ಕಮಹಾದೇವಿ ದೃಶ್ಯ ರೂಪಕದಲ್ಲಿ ಅಲ್ಲಮ ಪ್ರಭುದೇವ ಪಾತ್ರದಲ್ಲಿ ಸುನಿತಾ ತಪಶೆಟ್ಟಿ, ಉಮಾ ಪುಂಡಪ್ಪನವರ ಬಸವಣ್ಣ, ಸಂಗೀತಾ ಮಠಪತಿ ಅಕ್ಕಮಹಾದೇವಿ ಪಾತ್ರದಲ್ಲಿ, ಸುಮಾ ಜಿ. ಚನ್ನಬಸವಣ್ಣ, ಕಸ್ತೂರಿ ಬೆಳಕ್ಕಿ ಅಕ್ಕನಾಗಮ್ಮ ಶ್ವೇತಾ ಕಲ್ಯಾಣಶೆಟ್ಟರ ಮಡಿವಾಳ ಮಾಚಿದೇವ. ರಾಜೇಶ್ವರಿ ಮಠದ ಕಿನ್ನರಿ ಬೊಮ್ಮಯ್ಯ, ಶಶಿಕಲಾ ಕೋಳಕೂರ ಸಮಗಾರ ಹರಳಯ್ಯ, ನೀಲಾಂಬಿಕಾ ಹೊಸಕೆರಿ ಕಲ್ಯಾಣಮ್ಮ, ಪ್ರೇಮಾ ಗಡದ ಆಯ್ದಕ್ಕಿ ಲಕ್ಕಮ್ಮ ನಿರ್ಮಲಾ ಅಂಬಿಗರ ಚೌಡಯ್ಯ, ಸುಷ್ಮತಾ ಕಡಗದ ಹಡಪದ ಅಪ್ಪಣ್ಣ, ರಾಜೇಶ್ವರಿ ಕವಲೂರ ನೀಲಾಂಬಿಕೆ, ಸುಮಿತ್ರಾ ಎಲಿಗಾರ ಗಂಗಾಂಬಿಕಾ ನಂದಾ ರಾಮನಗೌಡರ ಬೊಂತಾದೇವಿ, ಶೋಭಾ ಅಂತಣ್ಣವರ ಸತ್ಯಕ್ಕ, ಗೌರಿ ಪಟ್ಟಣಶೆಟ್ಟಿ ಸುಮತಿ. ಕನ್ಯಾಕುಮಾರಿ ನಿರ್ಮಲ ಶೆಟ್ಟಿ, ರೇಣುಕಾ ಹೂಗಾರ ಆಯ್ದಕ್ಕಿ ಮಾರಯ್ಯ ಸೇರಿದಂತೆ ಬಸವಾದಿ ಶರಣರ ಪಾತ್ರದಲ್ಲಿ ವಚನ ಹೇಳುವ ಮೂಲಕ ತಮ್ಮ ಅನುಭಾವ ಮಂಡಿಸಿದರು. 
ಕಲ್ಯಾಣದಲ್ಲಿ ಅಲ್ಲಮ ಪ್ರಭುದೇವ ಹಾಗೂ ಅಕ್ಕಮಹಾದೇವಿ ನಡುವೆ ನಡೆದ ಸಂಭಾಷಣೆ ಮತ್ತು ಘರ್ಷಣೆ ಅನುಭಾವ ಅತ್ಯಂತ ತುಂಬಾ ಚೆನ್ನಾಗಿ ಮೂಡಿ ಬಂದಿತಲ್ಲದೆ ಅಕ್ಕಮಹಾದೇವಿ ಕದಳಿ ವನಕ್ಕೆ ತೆರಳಿ ಲಿಂಗದಲ್ಲಿ ಲೀನಳಾದ ದೃಶ್ಯ ಆದ್ಭುತವಾಗಿತ್ತು. ಅನುಭವ ಮಂಟಪದಲ್ಲಿ ಸೇರಿದ ವಿವಿಧ ಕಾಯಕಯೋಗಿಗಳು ಶರಣ ಶರಣೆಯರು ತಾವು ರಚಿಸಿದ ವಚನಗಳನ್ನು ಅಲ್ಲಮಪ್ರಭುದೇವರ ಮುಂದೆ ಮಂಡಿಸಿದ್ದಲ್ಲದೆ,  ಅನುಭಾವ ಮಾಡಿ ಪ್ರೇಕ್ಷಕರ ಮನ ಮುದಗೊಳಿಸಿ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ದೃಶ್ಯ ರೂಪಕ ಮೂಲಕ ಕಲ್ಯಾಣ ದರ್ಶನ ಮಾಡಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ