ರಾಮದುರ್ಗ: ತಾಲೂಕಿನಲ್ಲಿ ಉಂಟಾದ ಬೀಕರ ಬರಗಾಲದಿಂದ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅರಿತು ವಿಜಯ ಸೇನಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಜಂಟಿಯಾಗಿ ಸೆ.೨೬ ರಂದು ನಡೆಸಲು ಉದ್ದೇಶಿಸಲಾಗಿದ್ದ ರಾಮದುರ್ಗ ಬಂದ್ಗೆ ಕರೆಯನ್ನು ಬರ ಸೇರ್ಪಡೆ ಘೋಷಣೆ ಹಿಂಪಡೆದುಕೊಳ್ಳಲಾಗಿದೆ ಎಂದು ವಿಜಯ ಸೇನಾ ಸಮಿತಿಯ ಮಾರ್ಗದರ್ಶಕ ಮಲ್ಲಿಕಾರ್ಜುನ ಭಾವಿಕಟ್ಟಿ ಹೇಳಿದರು.
ಸ್ಥಳೀಯ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಂಕಷ್ಟು ಅರಿತು ಅವರ ಬೆಂಬಲವಾಗಿ ವಿಜಯ ಸೇನಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸೆ.೨೬ ರಂದು ರಾಮದುರ್ಗ ಬಂದ್ ಕರೆ ನೀಡಲಾಗಿತ್ತು. ಆದರೇ ಶಾಸಕರು ರೈತರ ಸಂಕಷ್ಟವನ್ನು ಅರಿತು ತಾಲೂಕಿನ ಸಮಗ್ರ ಬರ ವರದಿಯನ್ನು ಸರಕಾರದ ಗಮನಕ್ಕೆ ತಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ರಾಮದುರ್ಗ ತಾಲೂಕನ್ನು ಬರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಶ್ರಮಿಸಿದ್ದಾರೆ. ಆ ಹಿನ್ನಲೇಯಲ್ಲಿ ೨೬ ರಂದು ನಡೆಸಲು ಉದ್ದೇಶಿಸಲಾಗಿದ್ದ ರಾಮದುರ್ಗ ಬಂದ್ ಕರೆಯನ್ನು ಹಿಂಪಡೆದುಕೊಂಡಿದ್ದೇವೆ. ಅಲ್ಲದೇ ಬರ ಪಟ್ಟಿಗೆ ತಾಲೂಕನ್ನು ಸೇರ್ಪಡೆಗೊಳಿಸಲು ಶ್ರಮಿಸಿದ ಶಾಸಕರಿಗೆ ಸಮಿತಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತವೆ ಎಂದರು.
ವಿಜಯ ಸೇನಾ ಸಮಿತಿಯ ನಿರ್ದೇಶಕ ಸದಾನಂದ ಮುರಾರಿ ಅವರು ಮಾತನಾಡಿ, ಶಾಸಕ ಅಶೋಕ ಪಟ್ಟಣ ಅವರ ಪ್ರಯತ್ನದ ಫಲವಾಗಿ ತಾಲೂಕು ಬರ ಪಟ್ಟಿಯಲ್ಲಿ ಘೋಷಣೆಯಾಗಿದೆ. ಘೋಷಣೆ ಜೊತೆಗೆ ಬರುವ ದಿನಗಳಲ್ಲಿ ತಾಲೂಕಿನ ರೈತರಿಗೆ ನೆರವು ಹಾಗೂ ಜನರಿಗೆ ಉದ್ಯೋಗಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ ತಾಲೂಕಿನ ಜನರಿಗೆ ಅನುಕೂಲ ಕಲ್ಲಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಮಾದನ್ನವರ, ಬಿ.ಎಲ್. ಸಂಕನಗೌಡ್ರ, ಭಾರತೀಯ ಕಿಸಾನ ಸಂಘದ ತಾಲೂಕಾಧ್ಯಕ್ಷ ಸುರೇಶ ನಂದೆಪ್ಪನವರ, ವಿಜಯ ಸೇನಾ ಸಮಿತಿಯ ಅಧ್ಯಕ್ಷ ಮಾರುತಿ ಮಾದರ, ಬಸವರಾಜ ಕೋನನ್ನವರ, ಅಪ್ಪನಗೌಡ ಪಾಟೀಲ, ಅಂಬರೀಷ ಬಟಕುರ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
.