Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

"ದುಷ್ಟರ ಸಂಹಾರ ಮಾಡಿ ಧರ್ಮದ ವಿಜಯ ಸಾಧಿಸಿದ್ದೇ ವಿಜಯದಶಮಿ"

ಯರಝರಿಯಲ್ಲಿ ನವರಾತ್ರೋತ್ಸವ ಧರ್ಮಸಭೆ, ಗುರುವಂದನೆ, ಸಾಮೂಹಿಕ ವಿವಾಹ ಸಮಾರಂಭ

ಮುದ್ದೇಬಿಹಾಳ :  ಭಾರತದೇಶವು ಈ ಹಿಂದಿನ ಆದಿಕಾಲದಿಂದಲೂ ತನ್ನದೇ ಆದ ಧರ್ಮನಿಷ್ಟೆ ನ್ಯಾಯ ನಿಷ್ಟುರತೆಯಿಂದ ಕಾಪಾಡಿಕೊಂಡು ಬಂದಿದ್ದಲ್ಲದೇ ಧಾರ್ಮಿಕ ವಿಚಾರದಲ್ಲಿಯೂ ಸಹ ತನ್ನದೇ ಆದ ಛಾಪು ಮೂಡಿಸಿ ಮುನ್ನಡೆದಂತಹ ದೇಶ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಅವರು ನುಡಿದರು.
    ರವಿವಾರರಂದು ಸಮೀಪದ ಯರಝರಿ ಗ್ರಾಮದಲ್ಲಿ ಯಲ್ಲಾಲಿಂಗೇಶ್ವರ ಮಠದಲ್ಲಿ ನವರಾತ್ರೋತ್ಸವ ಅಂಗವಾಗಿ ಏರ್ಪಡಿಸಲಾದ ಧರ್ಮಸಭೆ ಗುರುವಂದನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಕಾರ್ಯಕ್ರಮವನ್ನು ದೀಪಬೆಳಗಿಸುವದರೊಂದಿಗೆ ಮಾತನಾಡುತ್ತಿದ್ದ ಅವರು ನಮ್ಮದೇಶದ ಶಾಂತಿ ಏಕತೆ ಅಲ್ಲದೇ ಪ್ರಜಾಪ್ರಭುತ್ವದನೀತಿ ನಡಾವಳಿಯಂತೆ ಮುನ್ನಡೆಯುವದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ ಯಾವದೇ ತರದ ಜಾತಿ ಬೇಧವಿಲ್ಲದೇ ಕೋಮು ಸೌಹಾರ್ಧತೆಯ ಭಾವನೆಯೊಂದಿಗೆ ಮುನ್ನಡೆಯುತ್ತಾ ಭಾರತ ದೇಶವನ್ನು ವಿಶ್ವಗುರು ಸ್ಥಾನಮಾನಕ್ಕೆ ಏರಿಸೋಣವೆಂದರು.
    ಇನ್ನೋರ್ವ ದಿವ್ಯ ಸಾನಿಧ್ಯವಹಿಸಿದ ಯಲ್ಲಾಲಿಂಗ ಮಠದ ಪೀಠಾದಿಪತಿಗಳಾದ ಮಲ್ಲಾಲಿಂಗಪ್ರಭು ಮಹಾರಾಜ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಳೆಗಾಗಿ ಪ್ರಾರ್ಥಿಸಿ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು.
    ಇನ್ನೋರ್ವ ಮಾಜಿ ಶಾಸಕ ಹಾಗೂ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರಾದ ಎ.ಎಸ್. ಪಾಟೀಲ(ನಡಹಳ್ಳಿ) ಅವರು ಮಾತನಾಡಿ ಬರಗಾಲದ ಪ್ರಕೃತಿ ವಿಕೋಪಗಳ ಕುರಿತು ರೈತಾಪಿ ಜನತೆ ಎದುರಿಸುತ್ತಾ ಸಾಗಿದ್ದಾರೆ ಇಂತಹ ವಿಷಯಗಳ ಕುರಿತು ರಾಜಕೀಯ ವಿಷಯಕ್ಕೆ ಸೀಮಿತವಾಗಿರದೇ ಅಭಿವೃದ್ದಿ ಕಾರ್ಯಗಳ ಕುರಿತು ಎಲ್ಲರೂ ಚಿಂತನೆ ನಡೆಸಬೇಕಾಗಿದೆ ಎಂದ ಅವರು ಆಲಿಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳ ಸಮರ್ಪಕ ಬಳಸಿಕೊಂಡು ರೈತಾಪಿ ಜನತೆಯ ಜಮೀನುಗಳಿಗೆ ತಲುಪುವಂತಹ ಕಾರ್ಯ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.  ಇದೇ ಸಮಯದಲ್ಲಿ ಉಪಸ್ತಿತ ರೈತರಿಗೆ ಇಳುವಳಿ ಪಡೆಯುವ ಕುರಿತು ಹಾಗೂ ಆಧುನಿಕ ತಂತ್ರಜ್ಞಾನ ಹೈನುಗಾರಿಕೆಯಂತಹ ಉದ್ಯೋಗ ವ್ಯವಸಾಯ ಮಾಡಿಕೊಂಡು ಮುನ್ನಡೆದರೆ ಇನ್ನಷ್ಟು ಹೆಚ್ಚಿನ ಬದುಕಿನ ಒಳ್ಳೆಯ ಮಾರ್ಗ ದೊರೆಯಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
    ಇದೇ ಸಮಯದಲ್ಲಿ ಎಂ.ಡಿ. ನಧಾಪ್ ಅಮರಗೋಳ ಹಾಗೂ ರಶ್ಮಿ ಬಸವರಾಜ ಪಾಟೀಲ ಅವರ ಕುಟುಂಬದವರ ವತಿಯಿಂದ ಶ್ರೀಗಳಿಗೆ ದವಸ ಧಾನ್ಯಗಳಿಂದ ತುಲಾಭಾರ ಕಾರ್ಯವನ್ನು ನೆರವೇರಿಸಲಾಯಿತು.
    ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದು ಅಲ್ಲದೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀಮಠದ ವತಿಯಿಂದ ಸಂಗೀತ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಈ ಕಾರ್ಯಕ್ರಮದಲ್ಲಿ ಜೋಡಿ ಒಂದರ ಉಚಿತ ವಿವಾಹವನ್ನು ನೆರವೇರಿಸಿ ನವದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲು ಶ್ರೀಗಳು ಆಶೀರ್ವದಿಸಿದರು.
    ಬಿಜೆಪಿ ಮುಖಂಡ ಹಾಗೂ ಜಾತ್ರಾ ಸಮೀತಿಯ ಅಧ್ಯಕ್ಷರಾದ ಮಲಕೇಂದ್ರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
    ಕಾರ್ಯಕ್ರಮದಲ್ಲಿ ಕುರುಬರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮದರಿ, ಜಿ.ಪಂ. ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ತಾ.ಪಂ. ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಪಿಎಂಸಿ ಮಾಜಿ ಸದಸ್ಯ ಮುತ್ತಣ್ಣ ಮುತ್ತಣ್ಣವರ, ತಾಲೂಕು ಪಿಂಜಾರ ಸಮಾಜದ ಅಧ್ಯಕ್ಷ ಎಂ.ಡಿ. ನಧಾಫ್, ಉತ್ಸವ ಸಮೀತಿಯ ಕಾರ್ಯದರ್ಶಿ ಮಹಾಂತೇಶ ಪಟ್ಟಣದ, ಬಿ.ಕೆ. ಬಿರಾದಾರ, ಆರ್.ಬಿ. ಗೌಡರ, ಬಸವರಾಜ ಹೊನವಾಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ಧೇಶಕ ಸೋಮನಗೌಡ ಬಿರಾದಾರ, ಶ್ರೀಕಾಂತ ಹಿರೇಮಠ, ಮಲ್ಲಯ್ಯ ಚೊಂಡಿ, ಬಿ.ಎಸ್. ಚಿಮ್ಮನಕಟ್ಟಿ, ಬಿ.ಕೆ. ಮಸೂತಿ, ಪರಶುರಾಮ ಕಾನ್ಯಾಳ, ಎಸ್.ಎಚ್. ಮುದ್ನಾಳ, ಸಿದ್ದು ಧನಗೊಂಡ, ಶಂಕರ ಪೂಜಾರಿ, ಕಾಶೀನಾಥ ಹುಗ್ಗಿ, ವೈ ವೈ ತಿಮ್ಮಾಪೂರ ಸೇರಿದಂತೆ ವಿವಿಧ ತಾಲೂಕಿನ ಭಕ್ತಾಧಿಗಳು ಭಾಗವಹಿಸಿದ್ದರು. ಮಹಾಂತೇಶ ಪಟ್ಟಣದ ಕಾರ್ಯಕ್ರಮ ನಿರ್ವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ