Vijay: ಕೇಂದ್ರಾಡಳಿತ ಪ್ರದೇಶ Puducherryನಲ್ಲಿ ಚುನಾವಣಾ ಪ್ರಚಾರ ಜೋರಾಗಿದೆ. ಹಲವು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೂ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಲು Bharatiya Janata Party ಮತ್ತು Indian National Congress ವಿಫಲವಾಗಿವೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಆರೋಪಿಸಿದ್ದಾರೆ.
ಪುದುಚೇರಿಯಲ್ಲಿ ಶನಿವಾರ (ಏ. 04) ನಡೆದ ಟಿವಿಕೆ ಸಭೆಯಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರ ಬಂದರೆ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪವಿಲ್ಲದೆ ಪೂರ್ಣ ರಾಜ್ಯ ಸ್ಥಾನಮಾನ ಪಡೆಯಲು ಶತಪ್ರತಿಶತ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಪಕ್ಷದ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಸ್ತುತ ಆಡಳಿತದಲ್ಲಿರುವ All India NR Congress–ಬಿಜೆಪಿ ಮೈತ್ರಿಯನ್ನು ‘ದಣಿದ ಮೈತ್ರಿ’ ಎಂದು ಟೀಕಿಸಿದ ಅವರು, Dravida Munnetra Kazhagam–ಕಾಂಗ್ರೆಸ್ ಮೈತ್ರಿಯನ್ನೂ ‘ಗೊಂದಲಮಯ’ ಎಂದು ವಾಗ್ದಾಳಿ ನಡೆಸಿದರು. ಜನರ ಪರ ನಿಲ್ಲುವ ಟಿವಿಕೆ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕೋರಿದರು.
ಹಿಂದೆ ಫ್ರೆಂಚ್ ವಸಾಹತು ಆಗಿದ್ದ ಪುದುಚೇರಿ 1962ರಲ್ಲಿ ಭಾರತಕ್ಕೆ ವಿಲೀನಗೊಂಡು ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿತು. ರಾಷ್ಟ್ರಪತಿಗಳಿಂದ ನೇಮಕವಾಗುವ ಲೆಫ್ಟಿನೆಂಟ್ ಗವರ್ನರ್ ಆಡಳಿತ ನಡೆಸುತ್ತಿದ್ದು, ಆಯ್ಕೆಯಾದ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ದೀರ್ಘಕಾಲದಿಂದ ರಾಜ್ಯ ಸ್ಥಾನಮಾನಕ್ಕೆ ಬೇಡಿಕೆ ಕೇಳಿಬರುತ್ತಿದೆ.
ಪ್ರಸ್ತುತ ಪುದುಚೇರಿ ವಿಧಾನಸಭೆಯಲ್ಲಿ 33 ಸದಸ್ಯರಿದ್ದು, 30 ಮಂದಿ ಚುನಾಯಿತರಾಗಿದ್ದಾರೆ; ಮೂವರನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.