ತಾಳಿಕೋಟೆ: ಸಂಪತ್ತು, ಅಧಿಕಾರ, ಸ್ಥಾನಮಾನ ಮತ್ತು ಶ್ರೀಮಂತಿಕೆಯೆಂಬುದು ಶಾಶ್ವತವಲ್ಲಾ ಜೀವನದಲ್ಲಿ ದೊರೆತಿಎರುವ ಸಂಪತ್ತು ಭಗವಂತನ ಎಂದು ಭಾವಿಸಿ ಅದರಲ್ಲಿಯ ಒಂದು ಬಾಗವನ್ನು ದಾನಧರ್ಮ ಹಾಗೂ ಸಮಾಜಸೇವೆಗೆ ಬಳಸಬೇಕೆಂದು ಯಾತಗಿರಿ ಜಿಲ್ಲೆಯ ರೊಟ್ನೊಟಗಿಯ ಖ್ಯಾತ ಪುರಾಣ ಪ್ರವಚನಕಾರರಾದ ವೇ|| ರಾಚಯ್ಯಶಾಸ್ತ್ರಿಗಳು ನುಡಿದರು.
ರವಿವಾರರಂದು ಶ್ರೀ ಖಾಸ್ಗತೇಶ್ವರರ ೧೩೦ ನೇಯ ಹಾಗೂ ವಿರಕ್ತಮಹಾಸ್ವಾಮಿಗಳವರ ೧೨ ನೇ ಪುಣ್ಯ ಸ್ಮರಣೋತ್ಸವ ಕುರಿತು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಲಾದ ೫ ದಿನಗಳ ಪ್ರವಚನದಲ್ಲಿ ಎರಡನೇ ದಿನದ ಪ್ರವಚನದಲ್ಲಿ ಮಾತನಾಡುತ್ತಿದ್ದ ಶ್ರೀಗಳು ತಾಳಿಕೋಟೆ ಪಟ್ಟಣದ ಭಾವೈಕ್ಯತೆಯ ಪಟ್ಟಣವಾಗಿದ್ದು ಇಲ್ಲಿ ಜಾತಿ ಮತ ಪಂಥವೆಂಬ ಬೇಧವಿಲ್ಲದೇ ಎಲ್ಲರೂ ಒಗೂಡಿಸುವ ದಾರ್ಮಿಕ ಪರಂಪರೆ ಇದೆ ಎಂದು ಶಾಸ್ತ್ರಿಗಳು ಅಭಿಪ್ರಾಯಪಟ್ಟರು ಶ್ರೀ ಖಾಸ್ಗತೇಶ್ವರ ಮಠವು ಎಲ್ಲರನ್ನು ತನ್ನ ಕುಟುಂಬದವರಂತೆ ಅಪ್ಪಿಕೊಂಡು ಭಕ್ತಿಧರ್ಮ ಮತ್ತು ಮಾನವೀಯತೆಯ ಸಂದೇಶಗಳನ್ನು ಸಾರುತ್ತಾ ಸಾಗಿದೆ ಎಂದು ಮಠದ ಇತಿಹಾಸವನ್ನು ವಿವರಿಸಿದ ಶಾಸ್ತ್ರಿಗಳು ಭಕ್ತರ ಪಾಲಿಗೆ ಶ್ರೀ ಖಾಸ್ಗತರು ಹಾಗೂ ವಿರಕ್ತ ಶ್ರೀಗಳು ಕಾಮಧೇನು ಮತ್ತು ಕಲ್ಪವೃಕ್ಷದಂತೆ ಇದ್ದಾರೆಂದರು. ಮಾನನ ಜೀವನದಲ್ಲಿ ಆಸೆಗಳು ಎಂದಿಗೂ ಮುಗಿಯುವದಿಲ್ಲಾ ವಿವಾಹದ ಆಸೆ ನಂತರ ಮಕ್ಕಳ ಆಸೆ ಕುಟುಂಬದ ಆಸೆ ಸಂಪತ್ತಿನ ಆಸೆ ಹೀಗೆ ಮನುಷ್ಯನು ಒಂದರ ಹಿಂದೆ ಮತ್ತೊಂದು ಆಸೆಯನ್ನು ಬೆನ್ನಟ್ಟುತ್ತಲೇ ಇರುತ್ತಾನೆ ಆದರೆ ಮಹಾತ್ಮರು ತಮ್ಮ ವೈಯಕ್ತಿಕ ಆಸೆಗಳನ್ನು ಬದಿಗಿಟ್ಟು ಭಕ್ತರ ಸಮಾಜ ಒಳಿತಿಗಾಗಿ ಬದುಕುತ್ತಾರೆ ಹೀಗಾಗಿ ಅವರು ಕಾಮಧೇನು ಮತ್ತು ಕಲ್ಪವೃಕ್ಷದಂತಾಗಿದ್ದಾರೆಂದರು. ತಾಳಿಕೋಟೆ ಪಟ್ಟಣದಲ್ಲಿ ನಡೆದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿಯೂ ಧಾನ ಧರ್ಮ ಸತ್ಕಾರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಸಹ ಇಲ್ಲಿಯ ಭಕ್ತ ಸಮೂಹ ಅಳವಡಿಕೊಂಡು ನಡೆದಿದ್ದಾರೆ ಈ ಕಾರಣದಿಂದಲೇ ತಾಳಿಕೋಟೆ ಪಟ್ಟಣ ಹೆಸರುವಾಸಿಯಾಗಿದೆ ಎಂದರು. ಮನುಷ್ಯನ ಜನ್ಮವೆಂಬುದು ಅತ್ಯಂತ ಅಮೂಲ್ಯವಾದದ್ದು ಅನೇಕ ಜೀವರಾಶಿಗಳ ನಡುವೆ ಮಾನ ಜನ್ಮದೊರೆತಿರುವದು ಪುಣ್ಯದ ಫಲವಾಗಿದೆ ಈ ಅಮೂಲ್ಯ ಜೀವನವನ್ನು ಕೇವಲ ಸಂಪತ್ತಿನ ಆಸೆಗಾಗಿ ಸೀಮಿತಗೊಳಿಸದೇ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡುವ ಮೂಲಕ ಸಾರ್ಥಕಗೊಳಿಸಿಕೊಳ್ಳಬೇಕೆಂದು ಶ್ರೀಗಳು ವಿವರಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಪೀಠಾದಿಪತಿ ಶ್ರೀ ಸಿದ್ದಲಿಂಗದೇವರು ಸಾನಿಧ್ಯವಹಿಸಿದ್ದರು.
ವೇ|| ಚಂದ್ರಶೇಖರಯ್ಯಾ ಹಿರೇಮಠ, ಗವಾಯಿಗಳಾದ ದೀಪಕಸಿಂಗ್ ಹಜೇರಿ, ಶಶಿಕುಮಾರ ಬಳಗಾನೂರ, ಬಸನಗೌಡ ಬಿರಾದಾರ, ವಾಯ್ಲೈನ್ ವಾದನೆಯನ್ನು ಯಲ್ಲಪ್ಪ ಗುಂಡಳ್ಳಿ, ಉಮಾಪತಿ ಹಿರೇಮಠ, ಕುಮಾರ ಕುದರಗೊಂಡ, ಸಂಗೀತಸೇವೆ ಸಲ್ಲಿಸಿದರು.
ಈ ಆಧ್ಯಾತ್ಮಿಕ ಪ್ರವಚನದ ಎರಡನೇ ದಿನದಂದು ತಾಳಿಕೋಟೆಯ ಭಕ್ತ ಸಮೂಹ ಮಠದ ಆವರಣದಲ್ಲಿಯೇ ಅಸಂಖ್ಯಾತ ಜನರು ಪಾಲ್ಗೊಂಡಿದ್ದರು.