Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

 ೨೨, ೧೨ ಮತ್ತು ೧೩  ನೇ ಗೇಟ್ ಗಳಿಂದ ನೀರು ಸೋರಿಕೆ ;  ರೈತರಲ್ಲಿ ಹೆಚ್ಚಿದ ಆತಂಕ  

ಅಧಿಕಾರಿಗಳ ನಿರ್ಲಕ್ಷದಿಂದ ಹಿಪ್ಪರಗಿ ಬ್ಯಾರೇಜನಿಂದ ನೀರು ಪೋಲು 

ನೀರಿನ  ಸೋರಿಕೆ ತಡೆಗಟ್ಟುವಂತೆ  ಜಿಲ್ಲಾಡಳಿತಕ್ಕೆ   ಮಾಜಿ ಶಾಸಕ ಶಹಜಹಾನ  ಡೊoಗರಗಾoವ  ಆಗ್ರಹ  
ಅಥಣಿ : ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷತನದಿಂದ  ತಾಲೂಕಿನ ರೈತರು ಮತ್ತು ಕಬ್ಬು ಬೆಳೆಗಾರರು ಆತಂಕ ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು  ಹಿಪ್ಪರಗಿ ಅಣೆಕಟ್ಟಿನ ಎಲ್ಲಾ ಗೇಟ್ ಗಳನ್ನು ಪರಿಶೀಲಿಸಿ  ಸೋರಿಕೆಯಾಗುತ್ತಿರುವ ನೀರನ್ನು  ಕೂಡಲೇ  ತಡೆಗಟ್ಟಬೇಕು ಎಂದು ಮಾಜಿ ಶಾಸಕ  ಹಾಗೂ  ಜೆಡಿಎಸ್  ಪಕ್ಷದ ರಾಜ್ಯ ಉಪಾಧ್ಯಕ್ಷ  ಶಹಜಹಾನ ಡೊಂಗರಗಾಂವ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದ್ದಾರೆ. 
  ಅವರು ರವಿವಾರ  ಹಿಪ್ಪರಗಿ ಅಣೆಕಟ್ಟಿನ ಮೂರು ಗೇಟುಗಳಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಜೀವನಾಡಿ ಆಗಿರುವ ಹಿಪ್ಪರಗಿ ಬ್ಯಾರೇಜನ ಮೂರು ಗೇಟ್ ನಂ. ೨೨, ೧೨ ಮತ್ತು ೧೩  ರಲ್ಲಿ  ಮತ್ತೆ ನೀರು ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾ  ನೀರಾವರಿ ಇಲಾಖೆಯ ಅಧಿಕಾರಿಗಳು ಇದು ನಿರ್ಲಕ್ಷತನ ತೋರುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಆದೇಶ ಇಲ್ಲಿ ಉಲ್ಲಂಘನೆಯಾಗುತ್ತಿದ್ದು, ಒಂದೆಡೆ ತಾಲೂಕಿನ ರೈತರಿಗೆ ವಿದ್ಯುತ್ ಕಡಿತ ಮಾಡಿ, ಬೆಳೆಗಳಿಗೆ ನೀರು ಹಾಯಿಸದಂತೆ ತಡೆಗಟ್ಟಲಾಗುತ್ತಿದ್ದು, ಇನ್ನೊಂದೆಡೆ ನೀರನ್ನ ಸಂಗ್ರಹಿಸದೆ ಪ್ರತಿದಿನ ಸಾಕಷ್ಟು ನೀರು ಪೋಲಾಗಿ ಹೋಗುತ್ತಿದೆ, ಗೇಟ್ ಗಳಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ಕೂಡಲೇ ತಡೆಗಟ್ಟಬೇಕು, ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದರು. 
  ಕಳೆದ ವರ್ಷ ಗೇಟ್ ನಂ. 22ರಲ್ಲಿ  ತಾಂತ್ರಿಕ ದೋಷವಾಗಿ ಗೇಟ್ ಮುರಿದು ಸುಮಾರು ಮೂರು ಟಿಎಂಸಿ ನೀರು  ಪೋಲಾಗಿತ್ತು, ನೀರೊಬ್ರಿ ಇಲಾಖೆಯ ಅಧಿಕಾರಿಗಳು ಹೊಸ ಗೇಟ್ ಅನ್ನ ಅಳವಡಿಸಿದ್ದಾರೆ, ಆದರೆ ಅದು ಹೊಂದಾಣಿಕೆ ಆಗದ ಕಾರಣ, ಮತ್ತೆ ಹಳೆಯ ಗೇಟನ್ನೆ ರಿಪೇರಿ ಮಾಡಿ ಅಳವಡಿಸಿದ್ದು, ಅವು ಶಿತಲಾವಸ್ಥೆಯಲ್ಲಿ ಇರುವುದರಿಂದ ನೀರು ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ, ಈ ರೀತಿ ನೀರು ಪ್ರತಿದಿನ ಸೋರಿಕೆಯಾಗಿ ಹೋದರೆ, ತಾಲೂಕಿನ ಜನತೆಗೆ ಬರುವ ಒಂದೆರಡು ತಿಂಗಳಲ್ಲಿ  ತೀವ್ರ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಎಲ್ಲಾ ಗೇಟ್ ಗಳನ್ನು ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿದ್ದು, ಈ ಕಾಮಗಾರಿ ಆಗುವವರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೋಲಾಗುತ್ತಿರುವ ನೀರನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಅಣೆಕಟ್ಟಿನಲ್ಲಿ ಕೇವಲ 4.36 ಟಿಎಂಸಿ ನೀರು ಸಂಗ್ರಹವಿದ್ದು,   ನೀರಾವರಿ ಇಲಾಖೆ ಅಧಿಕಾರಿಗಳು  ಜಿಲ್ಲಾಧಿಕಾರಿಗಳ ಆದೇಶದಂತೆ ಕಳೆದ ಒಂದು ವಾರದ ಹಿಂದೆಯೇ  ಅಣೆಕಟ್ಟಿನ ಎಲ್ಲಾ ಗೇಟ್ ಗಳನ್ನು ಬಂದ್ ಮಾಡುವ ಮೂಲಕ ನೀರನ್ನು ತಡೆಗಟ್ಟುತ್ತಿದ್ದಾರೆ. ಆದರೆ ಮೂರು ಗೇಟುಗಳಲ್ಲಿ ತಾಂತ್ರಿಕ ದೋಷವಿದ್ದು, ಅದನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ, ಆದ್ದರಿಂದ  ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು   ಜಿಲ್ಲಾಡಳಿತ  ಕೂಡಲೇ ಎಚ್ಚೆತ್ತುಕೊಂಡು  ಪೋಲಾಗುತ್ತಿರುವ ನೀರನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು. 
 ಬರಗಾಲ ಕಾಮಗಾರಿ ಆರಂಭಿಸಿ :  ರಾಜ್ಯ ಸರ್ಕಾರ  ತಾಲೂಕಿನ ರೈತರು ಮತ್ತು ರೈತ ಸಂಘಟನೆಗಳು ಹೋರಾಟ ಮಾಡಿದ ನಂತರ  ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ, ಬರಪೀಡಿತ ತಾಲೂಕು ಘೋಷಣೆಯಾಗಿ ತಿಂಗಳು ಕಳೆದರೂ  ಬರ ಪರಿಹಾರ ಕಾಮಗಾರಿಗಳು ಇನ್ನೂ ಆರಂಭಗೊಂಡಿಲ್ಲ, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ದನ ಕರುಗಳಿಗೆ ಮೇವಿಲ್ಲದೆ, ಜನರು ಉದ್ಯೋಗವಿಲ್ಲದೆ  ಅಲೆದಾಡುವಂತಾಗಿದೆ. ಆದ್ದರಿಂದ ಜಿಲ್ಲಾ ಆಡಳಿತ ಮತ್ತು  ತಾಲೂಕ ಮಟ್ಟದ ಅಧಿಕಾರಿಗಳು  ಕೂಡಲೇ ಗ್ರಾಮೀಣ ಪ್ರದೇಶದ ಜನತೆಗೆ  ಶುದ್ಧ ಕುಡಿಯುವ ನೀರು, ಗ್ರಾಮ ಪಂಚಾಯಿತಿಯಿಂದ ಉದ್ಯೋಗ, ದನ ಕರುಗಳಿಗೆ ಮೇವು ಬ್ಯಾಂಕ್ ಆರಂಭಿಸುವಂತೆ ಆಗ್ರಹಿಸಿದರು.  ಈ ಸಂದರ್ಭದಲ್ಲಿ ರೈತ ಮುಖಂಡರಾದ ದುಂಡಪ್ಪ ನಿಂಗನೂರ, ಶಬ್ಬೀರ್ ಗೌಡ ಪಾಟೀಲ, ವರ್ಧಮಾನ ಕಡೋಲಿ, ಚಂದ್ರಶೇಖರ ಉಣ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ