ಕೊಪ್ಪಳ,ಅ,೦೧: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊಪ್ಪಳದ ಭಾಗ್ಯನಗರದಲ್ಲಿರುವ ಗುಪ್ತ ಹೇರ್ ಫ್ಯಾಕ್ಟರಿಯಲ್ಲಿ ಸೆಪ್ಟೆಂಬರ್ ೨೮ ರಂದು ವಿಶ್ವ ರೇಬಿಸ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವರ್ಷದ ವಿಶ್ವ ರೇಬಿಸ್ ದಿನದ " Sಣಡಿoಟಿgeಡಿ ಖಿogeಣheಡಿ - ಒಗ್ಗಟ್ಟಿನ ಹೆಜ್ಜೆ, ರೇಬೀಸ್ ಮುಕ್ತ ಸಮಾಜದತ್ತ’ ಎಂಬ ಧ್ಯೇಯವಾಕ್ಯದಡಿ, ರೇಬಿಸ್ ರೋಗದ ಬಗ್ಗೆ ಅರಿವು, ಅದರ ಇತಿಹಾಸ, ತಡೆಗಟ್ಟುವಿಕೆ, ಯಾವುದೇ ಪ್ರಾಣಿಗಳ ಕಡಿತದ ನಂತರ ಮಾಡಬೇಕಾದ್ದು ಮತ್ತು ಮಾಡಬಾರದು, ರೇಬಿಸ್ ನಿರೋಧಕ ಲಸಿಕೆಯ ಮಹತ್ವ ಹಾಗೂ ನಿಗದಿತ ಲಸಿಕಾ ವೇಳಾ ಪಟ್ಟಿಯನ್ನು ಪೂರ್ಣಗೊಳಿಸುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಯಿತು.
ರೇಬಿಸ್ನಿಂದಾಗುವ ಸಾವುಗಳನ್ನು ತಡೆಗಟ್ಟಲು ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಮಹತ್ವವನ್ನು ಒತ್ತಿಹೇಳಲಾಯಿತು. ೨೦೩೦ರ ವೇಳೆಗೆ ನಾಯಿಯಿಂದ ಹರಡುವ ಮಾನವ ರೇಬಿಸ್ನಿಂದ ಶೂನ್ಯ ಸಾವುಗಳ ಗುರಿಯನ್ನು ಸಾಧಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ್ ಹೆಚ್., ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು. ಗುಪ್ತ ಹೇರ್ ಫ್ಯಾಕ್ಟರಿಯ ಮಾಲೀಕರಾದ ಶ್ರೀನಿವಾಸ ಗುಪ್ತ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.