Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಿ; ಆಯುಕ್ತ ಜ್ಞಾನೇಶ್ ಕುಮಾರ ಪದಚ್ಯುತಿಗೊಳಿಸಿ

ತುಮಕೂರು: ಜನರನ್ನು ಗೊಂದಲಕ್ಕೆ ದೂಡಿ ಮತಹಕ್ಕು ಕಸಿಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ರದ್ದು ಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಬೇಕು ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದರು.

ನಗರದ ಜನಚಳುವಳಿ ಕೇಂದ್ರದಲ್ಲಿ ಎಸ್.ಐ.ಆರ್ ಪ್ರತಿರೋಧ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಎಸ್‌ಐಆರ್ ಪ್ರಕ್ರಿಯೆ ನಡೆಸಿರುವುದೇ ತಪ್ಪು. ಇದು ಎಲ್ಲರನ್ನು ಒಳಗೊಂಡಿಲ್ಲ. ಮತದಾರರ ಪಟ್ಟಿಯಲ್ಲಿ ಬದುಕಿದವರನ್ನು ಬಿಟ್ಟು ಸತ್ತವರನ್ನು ಸೇರಿಸಿದ್ದಾರೆ. ಅವರನ್ನು ಫಾರಂ ನಂ. ೬ ತುಂಬಿ ಹೊಸ ಪಟ್ಟಿ ಮಾಡಿಸಿ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಬೇರೆ, ಬೇರೆ ರಾಜ್ಯಗಳಲ್ಲಿ ಮಾಡಿದ ಹಾಗೇ ಎಲ್ಲ ಕಡೆ ಗೆಲ್ಲುವುದಕ್ಕಾಗಿ ಎಸ್‌ಐಆರ್ ಮಾಡಲಾಗುತ್ತಿದೆ. ಇದರ ಹಿಂದೆ ಜ್ಞಾನೇಶ್ ಕುಮಾರ್ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಎಸ್‌ಐಆರ್ ಹೋರಾಟ ಹೊಸ ಸ್ವರೂಪ ಪಡೆಯುತ್ತಿದೆ. ನಿಮ್ಮ ಬೂತ್‌ಗಳಲ್ಲಿನ ಸಮಸ್ಯೆ ವೀಡಿಯೋ ಮಾಡಿ ಕಳುಹಿಸಿ, ಬೆಂಗಳೂರಿಗೆ ಬಂದು ಹೋರಾಟ ಮಾಡುವ ಅಗತ್ಯವಿಲ್ಲ. ನಿಮ್ಮ ನಿಮ್ಮ ಬೂತ್‌ಗಳಲ್ಲಿ ಕಂಡು ಬರುವ ಅನ್ಯಾಯ ಹಾಗೂ ಸಮಸ್ಯೆ ಮೊಬೈಲ್ ಫೋನ್‌ನಲ್ಲಿ ವೀಡಿಯೋ ಮಾ ಡಿ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ಥಳೀಯ ಪತ್ರಿ ಕೆ ಹಾಗೂ ನಮ್ಮ ತಂಡಕ್ಕೆ ಕಳುಹಿಸಿಕೊಡಿ. ಈ ಮೂ ಲಕ ಸ್ಥಳೀಯ ಮಟ್ಟದಲ್ಲಿ ಲಭ್ಯವಾಗುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಮುಂದಿನ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.

news_1790331955_0_934.webp

ಸೆ.೩೦ ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕದ ೧೦೦ ಬೂತ್‌ಗಳ ಪರಿಶೋಧನೆ ಮತ್ತು ತನಿಖಾ ವರದಿಯನ್ನು ಸಾಕ್ಷ್ಯಾ ಧಾರ ಗಳೊಂದಿಗೆ ಜನರ ಮುಂದಿಡಲಾಗುವುದು. ಅಂದು ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆ ಸಾಕ್ಷ್ಯಗಳನ್ನು ಮಂಡಿಸಿ ಸಾಮಾಜಿಕ ತನಿಖೆ (ಸೋಷಿಯಲ್ ಆಡಿಟ್) ನಡೆಸುವಂತೆ ಒತ್ತಾಯಿಸಲಾಗುವುದು ಎಂದರು.

ಅ.೧ರಂದು ದೆಹಲಿ, ಜಾರ್ಖಂಡ್, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳೊಂದಿಗೆ ರಾಷ್ಟ್ರಮಟ್ಟದ ಪತ್ರಿಕಾಗೋಷ್ಠಿ ನಡೆಸಲಾಗುವುದು. ೩ರಂದು ವಕೀಲರ ತಂಡದ ಮೂಲಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ವಿರುದ್ದ ಎಫ್‌ಐಆರ್‌ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅ.೧೫ರಂದು ದೆಹಲಿಯ ಜಂತರ್‌ಮಂಥರ್‌ನಲ್ಲಿ ವಿರೋಧ ಪಕ್ಷದ ಸಂಸದರು, ರೈತರು ಮತ್ತು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಒಕ್ಕೂಟಗಳನ್ನು ಒಳಗೊಂಡ ಬೃಹತ್ ಹೋರಾಟ ನಡೆಸಲಾಗುತ್ತದೆ. ಸಂತ್ರಸ್ತರು ಹಾಗೂ ಸಾಮಾನ್ಯ ಜನರು ಇನ್ನು ಮುಂದೆ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಧ್ವನಿ ಇಲ್ಲದವರ ಪರ ನಿಮ್ಮ ಧ್ವನಿಯಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿಂತಕ ದೊರೈರಾಜು, ಸಂಯುಕ್ತ ಹೋರಾಟದ ಸಿ.ಯತಿರಾಜು, ಎದ್ದೇಳು ಕರ್ನಾಟಕದ ಇಂದಿರಾ, ಸಿಐಟಿಯುನ ಸೈಯದ್ ಮುಜೀಬ್, ರೈತಸಂಘದ ಗೋವಿಂದರಾಜು, ಮಹಮದ್ ಯೂಸುಫ್, ವೀರಸಂಗಯ್ಯ, ತಾಜುದ್ದೀನ್, ಸಮೀಉಲ್ಲಾ ಮೊದಲಾದವರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST