ಮಧುಗಿರಿ: ಇಲ್ಲಿನ ಪುರಸಭೆ ಮತ್ತು ಪೊಲೀಸ್ ಜಂಟಿ ಕಾರ್ಯಚರಣೆಯಲ್ಲಿ ಫುಟ್ ಪಾಟ್ ತೆರುವುಗೊಳಿಸುವ ಕಾರ್ಯ ಮಂಗಳವಾರ ನಡೆಸಿದರು.
ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠ ಮುಂಭಾಗ ಬಸ್ ತಂಗುದಾಣಕ್ಕೆ ಹೊಂದಿಕೊಂಡಂತೆ ಇದ್ದಂತಹ ಪೆಟ್ಟಿಗೆ ಅಂಗಡಿ ಗಳನ್ನು ತೆರವುಗೊಳಿಸಿ ,ಬೀದಿ ಬದಿ ವ್ಯಾಪಾರಿಗಳು ಪುಟ್ ಪಾತ್ ಮೀರಿ ಅಂಗಡಿಗಳನ್ನು ಇಟ್ಟುಕೊಂಡಿದ್ದನ್ನು ಹಿಂದಕ್ಕೆ ಇಟ್ಟುಕೊಂಡು ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಸುಗಮವಾಗಿ ಓಡಾಡಲು ಆಗುವ ರೀತಿ ತೆರವು ಗೊಳಿಸಲಾಯಿತು.
ನಂತರ ಟೌನ್ ಹಾಲ್ ರಸ್ತೆ, ಡುಂ ಲೈಟ್ ವೃತ್ತ, ಹೈ ಸ್ಕೂಲ್ ರಸ್ತೆ ,ಕೆ.ಹೆಚ್. ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಪುಟ್ ಪಾತ್ ವ್ಯಾಪಾರಿಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಮತ್ತು ವಾಹನ ಸವಾರರು ಸಹ ಅನುಕೂಲವಾಗುವ ರೀತಿ ರಸ್ತೆಯ ಮೇಲಿದ್ದಂತಹ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ಹಿಂದಕ್ಕೆ ಇಟ್ಟುಕೊಂಡು ವ್ಯಾಪಾರ ಮಾಡುವಂತೆ ಸೂಚಿಸಲಾಯಿತು.
ಶಾಲಾ ಮಕ್ಕಳು ಅದರಲ್ಲೂ ವಿಶೇಷವಾಗಿ ಎಂಜಿಎಂ ಬಾಲಿಕಾ ವಿದ್ಯಾರ್ಥಿನಿಯರು ಶಾಲೆಯ ಬಿಟ್ಟ ನಂತರ ಗ್ರಾಮಗಳಿಗೆ ತೆರಳಬೇಕಾದಾಗ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದ ಬಸ್ ನಿಲ್ದಾಣದಲ್ಲಿ ನಿಲ್ಲಲು ಸಹ ಆಗದಂತಹ ಪರಿಸ್ಥಿತಿಯಲ್ಲಿ ಬಸ್ಸಿಗೆ ಕಾಯುತ್ತಿದ್ದನ್ನು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.
ಇದಲ್ಲದೆ ಪ್ಯಾಸೆಂಜರ್ ಆಟೋಗಳು ಎಲ್ಲಂದರಲ್ಲಿ ನಿಲ್ಲುತ್ತಿದ್ದರಿಂದ ಅಪಘಾತ ವಲಯವಾಗಿ ಪರಿವರ್ತನೆಗೊಂಡಿತ್ತು. ಇದನ್ನು ಮನಗಂಡ ಪೊಲೀಸ್ ಇಲಾಖೆ ಮತ್ತು ಪುರಸಭೆಯವರು ಪುಟ್ ಪಾಟ್ ತೆರವು ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪಿಎಸ್‌ಐ ಎಮ್.ಎಸ್ .ಚಂದ್ರಶೇಖರ್,ಪುರಸಭೆ ಆರೋಗ್ಯ ನಿರೀಕ್ಷಕ ಬಾಲಾಜಿ ,ಸುರೇಶ್ ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ತೆರವು ಕಾರ್ಯದಲ್ಲಿ ಪಾಲ್ಗೊಂಡಿದ್ದರು.