ವಿಶೇಷ ವರದಿ
ಮೈಸೂರು ದಸರಾ ಜಂಬೂಸವಾರಿಯಲ್ಲಿ ಕಲ್ಪತರು ನಾಡಿಗೆ ಮಲತಾಯಿ ಧೋರಣೆ. ಅಧಿಕಾರಿಗಳ ಲಾಭಿ ಮತ್ತು ರಾಜಕೀಯ ಮೇಲಾಟದ ನಡುವೆ ತುಮಕೂರು ಅವಕಾಶ ವಂಚಿತ.. ದಸರಾ ಮಹೋತ್ಸವ ವೈಭವ ಮತ್ತು ಆಕರ್ಣಣೆ ಕಡಿವಾಣ ಮತ್ರು ಕಲಾವಿದರು, ಶಿಲ್ಪಿಗಳ ಬದುಕಿಗೆ ಕೊಳ್ಳಿ. ಬಂಡವಾಳಶಾಯಿಗಳ ಮೇಲಾಟವೋ, ಸರ್ಕಾರಿ ಆಡಳಿತದ ತಾತ್ಸಾರವೋ, ಆಂತರಿಕ ರಾಜಕೀಯದ ಮುಸುಕಿನ ಗುದ್ದಾಟವೋ ? ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ವೈಭವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ,ಸ್ತಬ್ಧಚಿತ್ರ ಆಯ್ಕೆ ವಿಚಾರದಲ್ಲಿ ಸರ್ಕಾರ ಮುಜುಗರಕ್ಕೊಳಗಾಗಿರುವ ಪ್ರಸಂಗ ಈಗ ನಾಡಿನಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಆಚರಣೆ ಮಧ್ಯೆಪ್ರವೇಶ ಮಾಡಿರುವ ಸರ್ಕಾರ ಗುಣಮಟ್ಟದ ಕಾರಣ ಇಟ್ಟುಕೊಂಡು ವಿವಾದಕ್ಕೊಳಗಾಗಿದೆ.
ವಾಸ್ತವವಾಗಿ ಮೈಸೂರು ಜಿಲ್ಲಾಡಳಿತ ನೇತೃತ್ವದ ದಸರಾ ಸ್ತಬ್ಧಚಿತ್ರ ಸಮಿತಿ ವಾಡಿಕೆಯಂತೆ 31 ಜಿಲ್ಲೆಗಳ ವಿಷಯಾಧಾರಿತ ಗುಣಮಟ್ಟದ ಸ್ತಬ್ಧಚಿತ್ರ ಆಯ್ಕೆ ಮಾಡಿ, ಮೆರವಣಿಗೆಯಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಅಧಿಕಾರ ಹೊಂದಿರುತ್ತದೆ. ಈ ಬಾರಿ ಕೇವಲ 15 ಸ್ತಬ್ಧಚಿತ್ರಕ್ಕೆ ಮಾತ್ರ ಅವಕಾಶ ಕಲ್ಪಿಸುವ ಮೂಲಕ ಉಳಿದ ಜಿಲ್ಲೆಗಳ ಭಾಗವಹಿಸುವಿಕೆಗೆ ಕಡಿವಾಣ ಹಾಕಿದ್ದು ಪ್ರಗತಿಯ ಪಥದಲ್ಲಿರುವ ತುಮಕೂರು ಜಿಲ್ಲೆಯನ್ನೂ ಕೈ ಬಿಡಲಾಗಿದೆ.
ಕಲ್ಪತರು ನಾಡು ತುಮಕೂರು ಜಿಲ್ಲೆಯ ಸ್ತಬ್ಧಚಿತ್ರಕ್ಕೆ (ಟ್ಯಾಬ್ಲೋ) ಈ ಬಾರಿ ಅವಕಾಶ ನಿರಾಕರಿಸಿರುವುದು ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ, ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತುಮಕೂರು ಜಿಲ್ಲೆಯನ್ನು ದಸರಾ ಮೆರವಣಿಗೆಯಿಂದ ಹೊರಗಿಟ್ಟಿರುವುದು ಕೇವಲ ಆಡಳಿತಾತ್ಮಕ ಲೋಪವೋ ಅಥವಾ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರನ್ನು ಗುರಿಯಾಗಿಸಿಕೊಂಡು ನಡೆದಿರುವ ವ್ಯವಸ್ಥಿತ ಪಿತೂರಿಯೋ, ಲಾಭ ನಷ್ಟದ ಲೆಕ್ಕಾಚಾರವೋ, ಭ್ರಷ್ಟಾಚಾರದ ಪ್ರಭಾವವೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದರೊಂದಿಗೆ, ತಿಂಗಳುಗಳಿಂದ ಭಕಪಕ್ಷಿಯಂತೆ ಕಾಯುತ್ತಿದ್ದ ಜಿಲ್ಲೆಯ 50ಕ್ಕೂ ಹೆಚ್ಚು ನುರಿತ ಕಲಾವಿದರು, ಸಹಾಯಕರು, ಕಾರ್ಮಿಕರಿಗೆ ನಿರಾಸೆ ಉಂಟಾಗಿದೆ. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕೃಷಿ, ಕೈಗಾರಿಕೆಯಲ್ಲಿ ಸಮಗ್ರ ಪ್ರಗತಿ ಕಾಣುತ್ತಿದ್ದ ಕಲ್ಪತರು ನಾಡು ತುಮಕೂರಿನ ಮೇಲೆ ರಾಜ್ಯ ಆಡಳಿತ ವಕ್ರ ದೃಷ್ಟಿ ಬಿತ್ತೆ. ಈ ರಾಜಕೀಯ ಮೇಲಾಟಕ್ಕೆ ಬಲಿಯಾಯ್ತಾ ಜಿಲ್ಲೆಯ ಅಸ್ಮಿತೆ?
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪಾವನ ಕರ್ಮಭೂಮಿ, ಏಷ್ಯಾದ ಅತಿ ದೊಡ್ಡ ಪಾವಗಡ ಸೋಲಾರ್ ಪಾರ್ಕ್, ನಿಟ್ಟೂರು ಹೆಚ್ ಎ ಎಲ್, ಇಸ್ರೋ, ಮೆಟ್ರೋ, ಜಪಾನ್ ಟೌನ್ ಶಿಪ್, ಚೆನೈ ಕಾರಿಡಾರ್, ವಿಶ್ವ ಗಮನ ಸೆಳೆದ ತೆಂಗು, ನಿಸರ್ಗದತ್ತ ಗಿರಿಧಾಮಗಳು ಹಾಗೂ ಶರವೇಗದ ನಗರೀಕರಣದ ಜೊತೆಗೆ ಕಲ್ಪತರು ವೈಭವವನ್ನು ಹೊತ್ತಿರುವ ತುಮಕೂರು ಜಿಲ್ಲೆಯ ಔಚಿತ್ಯ, ಮಹತ್ವ, ಪ್ರಗತಿಯನ್ನರಿಯದ ಆಯ್ಕೆ ಸಮಿತಿ ಏಕಪಕ್ಷಿಯ ನಿರ್ಧಾರದ ಮೂಲಕ ಜಿಲ್ಲೆಯ ಆಯ್ಕೆ ಪ್ರಸ್ತಾವನೆಯನ್ನು ತಿರಸ್ಕರಿಸಲು ಸಮಿತಿಯು ನೀಡಿರುವ ತಾಂತ್ರಿಕ ಕಾರಣಗಳು ಸಾರ್ವಜನಿಕರಲ್ಲಿ ನುಂಗಲಾರದ ತುತ್ತಾಗಿದೆ.
ಕಲೆಯ ಬಗ್ಗೆ ಯಾವುದೇ ಅನುಭವ, ಪರಿಣಿತಿ ಮತ್ತು ಅರ್ಹತೆ ಇಲ್ಲದೇ ಯಾವ ಮಾನದಂಡದಲ್ಲಿ ಸ್ತಬ್ಧಚಿತ್ರಗಳ ಆಯ್ಕೆ ನಡೆದಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ತುಮಕೂರು ಸ್ತಬ್ಧಚಿತ್ರ ಹೋಗುವುದು ಮತ್ತು ಕಲ್ಪತರು ನಾಡು ತುಮಕೂರು ಜಿಲ್ಲೆಯ ಶರವೇಗದ ಪ್ರಗತಿ ಜಗತ್ತಿಗೇ ತಿಳಿಸುವುದು ನಮ್ಮ ಹಕ್ಕು, ಇದು ಜಿಲ್ಲೆಯ ಸ್ಚಾಭಿಮಾನದ ಪ್ರಶ್ನೆ. ಇದರ ಬಗ್ಗೆ ಉದಾಸೀನತೆ, ನಿಷ್ಕಾಳಜಿ ವಹಿಸುವ ಜಿಲ್ಲಾಡಳಿತ, ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಹಾಗೂ ರಾಜಕೀಯ ವಲಯದ ಬೇಜವಬ್ಧಾರಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಜನ ದೂರುತ್ತಿದ್ದಾರೆ. ತುಮಕೂರು ದಸರಾಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಜಿಲ್ಲಾಡಳಿತ ವಿಶ್ವ ವಿಖ್ಯಾತ ಮೈಸೂರು ದಸರಾ ಮಹತ್ವದ ಕಡೆ ನಿರಾಸಕ್ತಿ ತೋರಿದೆ ಎನ್ನುವ ಮಾತು ಪ್ರಬುದ್ಧ ಜನರ ಮತ್ತು ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿಬರುತ್ತಿದೆ.
ಜಿಲ್ಲೆಯ ಸಚಿವರು ಮತ್ತು ಶಾಸಕರು ಹಾಗೂ ಅಧಿಕಾರಿ ವರ್ಗ ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರದಿರುವುದು, ಜಿಲ್ಲೆಯ ಮಹತ್ವ ಮನವರಿಕೆ ಮಾಡದಿರುವುದು, ಅಯ್ಕೆ ಸಮಿತಿಯ ನಿರ್ಧಾರ ಅಸಂಜಸ ಮತ್ತು ಅವೈಜ್ಞಾನಿಕ ಎಂದು ಹೇಳದಿರುವುದು ಜಿಲ್ಲಾ ವ್ಯವಸ್ಥೆಯ ಹಿಂಜರಿತನ, ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶ ಮಾಡದಿರುವುದು ಲೋಪವಾಗಿದೆ ಎಂದು
ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಕಲೆಗೆ, ಕಲಾವಿದರಿಗೆ ಸಿಗದ ಮನ್ನಣೆ: ಬಙಡವಾಳಶಾಹಿಗಳ ಪ್ರವೇಶ.
ಹೊರಗುತ್ತಿಗೆ ಮತ್ತು ರಾಜಕೀಯ ಪ್ರಭಾವದ ಹಂಚಿಕೆಗಳ ನಡುವೆ, ದಶಕಗಳಿಂದ ಪರಂಪರಾಗತವಾಗಿ ಕಲೆಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯ ಕಲಾವುದರು, ಕುಶಲಕರ್ಮಿಗಳ ಕೂಗು ಆಡಳಿತದ ಕಿವುಡು ಕಿವಿಗೆ ಮುಟ್ಟುತ್ತಿಲ್ಲ ಎಂದು ಹಾಗೂ ಆಡಳಿತದ ಹೊಣೆಗೇಡಿತನಕ್ಕೆ ಸಾರ್ವಜನಿಕರ ಛೀಮಾರಿ ಹಾಕುತ್ತಿದ್ದಾರೆ. ತಿಪಟೂರು ನಗರಸಭೆಯ ಪೌರಾಯುಕ್ತ ತನ್ನ ವಿಶ್ವಾಸಿಗಳಾದ ಹೊರಗಿನ ಜನರಿಗೆ ಊರಿನ ಅಲಂಕಾರದ ಕೆಲಸ ಕೊಟ್ಟು ಸ್ಥಳೀಯ ಕಲಾವಿದರ ಹೊಟ್ಟೆ ಮೇಲೆ ಹೊಡಿದಿದ್ದು ಇಂತಹ ದುಸ್ಸಾಹಸ ಈಗ ರಾಜ್ಯ ಸರ್ಕಾರ ಮಾಡುತ್ತಿದೆ. ತುಮಕೂರು ದಸರಾದಲ್ಲೂ ಅರ್ಹ ಕಲಾವಿದರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.