ಮಧುಗಿರಿ: ಜಮೀನೊಂದರ ಪೌತಿ ಖಾತೆ ಮಾಡಲು 1 ಲಕ್ಷ ರೂ ಗಳಿಗೆ ಲಂಚದ ಬೇಡಿಕೆ ಇಟ್ಟು 30 ಸಾವಿರ ರೂಗಳನ್ನು ಪಡೆಯುತ್ತಿದ್ದ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ನಾಗೇಶ್ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಕಳೆದ 6 ತಿಂಗಳಿಂದ ಕೆಲಸ ಮಾಡದೇ ವಿಳಂಬ ಮಾಡುತ್ತಿದ್ದು, ರೇಣುಕೇಶ್ ಬಿನ್ ಲಕ್ಷ್ಮೀ ನಾರಾಯಣಪ್ಪ ಮುದ್ದೇನಹಳ್ಳಿ ಗಂಜಲಗುಂಟೆ ಪಂಚಾಯತ್. ತಾಯಿ ರತ್ನಮ್ಮ ಹಾಗೂ ದೊಡಮ್ಮ ಗಂಗಮ್ಮ ಇವರ ಹೆಸರಿಗೆ ಪೌತಿ ಖಾತೆ ಚೆಕ್ ಲಿಸ್ಟ್ ತೆಗೆಯುವಾಗ ತಾಲೂಕು ಆಡಳಿತ ಸೌಧ ಕಛೇರಿಯ ಕೆಸ್ವನ್ ಆಫೀಸ್‌ನಲ್ಲಿ ದಾಳಿ ನಡೆದಿದೆ.
ದೂರುದಾರರ ಹೇಳಿಕೆ ಪ್ರಕಾರ 1 ಲಕ್ಷದ ಹಣದಲ್ಲಿ ಈಗಾಗಲೇ 45,000 ರೂ. ಗಳನ್ನು ಕಸಬಾ ಅರ್ ಐ ನಾಗೇಶ್ ಅವರ ಪತ್ನಿಯ ಹೆಸರಿನ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದು, ಇಂದು ಗುರುವಾರ 30,000 ರೂ ಪಡೆಯುವಾಗ ಲೋಕಾಯುಕ್ತರಿಗೆ ಸಿಲುಕಿಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಮಲ್ಲೇಶ್, ಡಿವೈಎಸ್ಪಿಗಳಾದ ಸಂತೋಷ್, ಮಂಜುನಾಥ್ ಗೌಡ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರಾಜು, ಟಿ. ನಿರ್ಮಲ, ಶಾಂತಿನಾಥ್ ಹೊನ್ನೂರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.