- ಅತಾವುಲ್ಲಾ, ಶಿರಾ.
ಶಿರಾ: ಐತಿಹಾಸಿಕ ಶಿರಾ ನಗರದ ಹಜರತ್ ಆರೀಫ್ ಶಾ ಖಾದ್ರಿ ಅವರ ದರ್ಗಾದ ಉರುಸ್ ಮೈದಾನದಲ್ಲಿ ಅದ್ದೂರಿಯಾಗಿ ಧ್ವಜಾರೋಹಣ (ಝಂಡ ಆಚರಣೆ) ನೆರವೇರಿತು.
ಝಂಡ ಆಚರಣೆಯ ಅಂಗವಾಗಿ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಂ ಸಮುದಾಯದ ಭಕ್ತರು ದರ್ಗಾ ಆವರಣಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿ, ಹರಕೆ ತೀರಿಸಿದರು.
ಭಕ್ತರ ಅಪಾರ ಸಂಖ್ಯೆಯಿಂದ ನಗರದ ಮಧುಗಿರಿ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಜನಸಂದಣಿ ಕಂಡುಬಂದಿದ್ದು, ದರ್ಗಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನರಿಂದ ಕಿಕ್ಕಿರಿದು ತುಂಬಿದ್ದವು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ನೇತೃತ್ವದಲ್ಲಿ, ನಗರ ಸಿಪಿಐ ಪ್ರವೀಣ್ ಕುಮಾರ್ ಅವರ ಮುಂದಾಳತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಜಂಡ ಆಚರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು, ನಗರದ ವಿವಿಧ ಮಸೀದಿಗಳ ಮುತ್ತವಲ್ಲಿಗಳು, ಮುಜಾವರ್‌ಗಳು ಹಾಗೂ ವಿವಿಧ ಮುಖಂಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.