Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಾಲಾ ಮಕ್ಕಳಿಗೆ ಕಳಪೆ ಶೂ; ಗುಣಮಟ್ಟವಲ್ಲದ ಆಹಾರ

-ಸತ್ಯ ಲೋಕೇಶ್
ಪಾವಗಡ: ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಿಸಿ, ಗುಣಮಟ್ಟವಲ್ಲದ ಆಹಾರ ನೀಡುತ್ತಾ ಭ್ರಷ್ಟಾಚಾರ ಎಸಗಿ ಕೀಳುಮಟ್ಟದ ಆಡಳಿತ ನಡೆಸುತ್ತಿದೆ ಎಂದು  ರಾಜ್ಯ ಸರ್ಕಾರದ ವಿರುದ್ಧ  ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಜಾಟಿ ಏಟು ಬೀಸಿದರು .
ಬುಧವಾರ ಪಟ್ಟಣದ ಶ್ರೀ ಯೋಗಿ ನಾರಾಯಣ ಸ್ವಾಮಿ ದೇವಸ್ಥಾನದ ಅವಣದಲ್ಲಿ ಸಮುದಾಯ ಭವನ ಲೋಕಾರ್ಪಣೆ ಮತ್ತು ಪಾವಗಡ ಪಟ್ಟಣದ ರೊಪ್ಪ  ಬಳಿ ನಿರ್ಮಾಣವಾಗಿರುವ ನೂತನ ರೈಲ್ವೆ ನಿಲ್ದಾಣ, ಕಡಮಲಕುಂಟೆಯಲ್ಲಿ ವಿವಿಧ ಕಾಮಗಾರಿ, ರಾಜವಂತಿ ಬಳಿ ಸಮುದಾಯ ಭವನ ಲೋಕಾರ್ಪಣೆ ಮತ್ತು   ರಾಜವಂತಿಯ ಗಡಿ ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ನಂತರ ಪಟ್ಟಣದ ಬಿಜೆಪಿ ಕಾರ್ಯಕರ್ತರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
 ವಿಬಿ ಜಿ ರಾಮ್‌ಜಿ ಯೋಜನೆಯಲ್ಲಿ ಇಲ್ಲಿವರೆಗೆ ರಾಜ್ಯ ಸರ್ಕಾರ ಹಣದ ಬಳಕೆ ಪ್ರಮಾಣ ಪತ್ರ ನೀಡಿಲ್ಲ, ಹಣದ ಬಳಕೆ ಪ್ರಮಾಣ ಪತ್ರ ನೀಡಿದರೆ ಬಜೆಟ್‍ನಲ್ಲಿ ಹಣ ಮೀಸಲಿಡಲಾಗುತ್ತದೆ, ಪಾವಗಡ ತಾಲೂಕಿನ ಸೋಲಾರ್ ಸಿಎಸ್‍ಆರ್ ಫಂಡಿನಲ್ಲಿ ಪಾವಗಡ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ, ಮತ್ತು ಸೋಲಾರ್ ಪಾರ್ಕ್ ನ ತೆರಿಗೆಯನ್ನು ಗ್ರಾಮ ಪಂಚಾಯಿತಿಗಳು ವಸೂಲಿ  ಮಾಡಲು ಸಂಪೂರ್ಣ ಅಧಿಕಾರವಿದೆ, ಭದ್ರಾ ಮೇಲ್ದಂಡೆ ಯೋಜನೆಯ 22 ಸಾವಿರ ಕೋಟಿಯಲ್ಲಿ 12,000 ಕೋಟಿ ಮಾತ್ರ ಬಳಕೆಯಾಗಿದೆ ಉಳಿದ 10. ಸಾವಿರ ಕೋಟಿಯ ಕಾಮಗಾರಿಗಳು ನಡೆಯಬೇಕಾಗಿದೆ, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಾಂಶುಪಾಲರ ಅಮಾನತ್ತುಗೆ  ಸೂಚನೆ:
ನಂತರ ದೊಡ್ಡಹಳ್ಳಿ ವಾಜಪೇಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಕೆಡಾಮಂಡಲರಾಗಿ  ಶಾಲೆಯ ಪ್ರಾಂಶುಪಾಲರನ್ನುಈ ಕೂಡಲೇ ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು 
 ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ,ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಆರ್. ಸಿ.ಅಂಜನಪ್ಪ, ಬಿಜೆಪಿ ಮುಖಂಡರಾದ ಡಾ. ಜಿ ವೆಂಕಟರಾಮಯ್ಯ, ತಾಲ್ಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್, ಬಿಜೆಪಿ ರವಿ, ಪ್ರಭಾಕರ ಮ್ಯಾಸ ನಾಯಕ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್..ಎ.ಈರಣ್ಣ ಮಾಜಿ ಅಧ್ಯಕ್ಷ ಬಲರಾಮ ರೆಡ್ಡಿ, ಮತ್ತಿತರರು ಇದ್ದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST