Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಏಳು ದಶಕಗಳ ಬಳಿಕ ಅಲೆಮಾರಿ ದಕ್ಕಲಿಗ ಕುಟುಂಬಗಳಿಗೆ ಬೆಳಕಿನ ಭಾಗ್ಯ

 ಚಿಕ್ಕನಾಯಕನಹಳ್ಳಿ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿದ್ದ ಅಲೆಮಾರಿ ದಕ್ಕಲಿಗ ಸಮುದಾಯದ 9 ಬಡ ಕುಟುಂಬಗಳ ಮನೆಗಳಿಗೆ ಇದೀಗ ವಿದ್ಯುತ್ ಬೆಳಕು ತಲುಪಿದೆ.

ತಿಪಟೂರು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನರಸಿಂಹಮೂರ್ತಿ ಅವರು ಮಾನವೀಯತೆಯ ದೃಷ್ಟಿಯಿಂದ ವೈಯಕ್ತಿಕವಾಗಿ ನೆರವು ನೀಡುವ ಮೂಲಕ ಈ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಾದ ವಿದ್ಯುತ್ ಸಾಮಗ್ರಿಗಳನ್ನು ಒದಗಿಸಿದ್ದಾರೆ.
ರಾಮಕ್ಕ, ದಿವಂಗತ ರಾಮಯ್ಯಕರ ಎಲ್ಲಮ್ಮ, ದಿವಂಗತ ನಾಗೇಂದ್ರಪ್ಪ, ಸುಜಾತ, ದಿವಂಗತ ಕುಮಾರ್, ಹನುಮಂತ, ದಿವಂಗತ ನಿಂಗಪ್ಪ, ನಿರ್ಮಲಾ (W/o ಶಾಂತರಾಜ್) ಹಾಗೂ ಜಾನಕಮ್ಮ (W/o ಗುರು) ಸೇರಿದಂತೆ 9 ಕುಟುಂಬಗಳಿಗೆ ತಲಾ ವಿದ್ಯುತ್ ದೀಪಗಳು ಹಾಗೂ ಅಗತ್ಯ ಪೈಪ್‌ಗಳು, ಒಂದು ಡಿಪಿ, ಒಂದು ಮೀಟರ್ ಬೋರ್ಡ್ ಸೇರಿದಂತೆ ಸುಮಾರು ₹10,000 ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಒದಗಿಸಲಾಗಿದೆ.
news_1790247936_0_978.webp
ಅಲೆಮಾರಿ ಸಮುದಾಯಗಳ ಪರಿಶಿಷ್ಟ ಒಕ್ಕೂಟ, ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ.) ಹಾಗೂ ಬಾಬು ಜಗಜೀವನ್ ರಾಮ್ ಸಂಸ್ಥೆ ವತಿಯಿಂದ ಈ ಕುಟುಂಬಗಳಿಗೆ ವಿದ್ಯುತ್ ಬೆಳಕು ಒದಗಿಸುವಂತೆ ಮನವಿ ಮಾಡಲಾಗಿತ್ತು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಈ ಕುಟುಂಬಗಳು ಹಲವು ವರ್ಷಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು.
ಮನವಿಯನ್ನು ಪರಿಗಣಿಸಿದ ನರಸಿಂಹಮೂರ್ತಿ ಅವರು ಕುಟುಂಬಗಳ ಬಡತನ ಹಾಗೂ ಸಂಕಷ್ಟವನ್ನು ಸ್ವತಃ ಅರಿತು, ಮಾನವೀಯ ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಇದರಿಂದ ಇಷ್ಟು ವರ್ಷಗಳ ಕಾಲ ಸೂರ್ಯ-ಚಂದ್ರನ ಬೆಳಕಿನಲ್ಲೇ ಜೀವನ ನಡೆಸುತ್ತಿದ್ದ ಕುಟುಂಬಗಳು ಇದೀಗ ಆಧುನಿಕ ವಿದ್ಯುತ್ ಬೆಳಕಿನ ಜಗತ್ತಿಗೆ ಕಾಲಿಟ್ಟಂತಾಗಿದೆ.
ವಿಶೇಷವಾಗಿ, ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಸುಜಾತ ಅವರು ತಮ್ಮ ತಂಗಿ ಹಾಗೂ ತಮ್ಮನನ್ನು ಓದಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು, ಚೌಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಕುಟುಂಬವನ್ನು ಮುನ್ನಡೆಸುತ್ತಿದ್ದ ಅವರಿಗೆ ವಿದ್ಯುತ್ ಸಂಪರ್ಕ ದೊರೆತಿರುವುದು ಸಂತಸ ತಂದಿದೆ.
ಈ ಕುರಿತು ಮಾತನಾಡಿದ ಕುಟುಂಬಸ್ಥರು, “ನಮ್ಮ ಮನೆಗಳಿಗೆ ಬೆಳಕು ಬರುವುದು ಕನಸಿನಂತಾಗಿತ್ತು. ಇಷ್ಟು ವರ್ಷಗಳ ನಂತರ ನಮ್ಮ ಮನೆಗಳಲ್ಲಿ ವಿದ್ಯುತ್ ದೀಪ ಬೆಳಗಿರುವುದು ಕಣ್ಣಿಲ್ಲದವರಿಗೆ ಕಣ್ಣು ಬಂದಂತಾಗಿದೆ. ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡಿದ ನರಸಿಂಹಮೂರ್ತಿ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸಿದರು.
ಈ ನೆರವು ದೊರಕಲು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ತೇಜಾ ಡಿ.ಎಸ್., ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಲೆಮಾರಿ ಡಿ. ಶಾಂತರಾಜು, ಸದಸ್ಯರಾದ ಗುರುಮೂರ್ತಿ, ಚಿದಾನಂದಮೂರ್ತಿ, ಚನ್ನಕೇಶವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಕೆಂಚಪ್ಪ ಅವರು ಸಹಕರಿಸಿದ್ದಾರೆ.
ಅಲೆಮಾರಿ ದಕ್ಕಲಿಗ ಸಮುದಾಯದ ಕುಟುಂಬಗಳಿಗೆ ಬೆಳಕು ಒದಗಿಸುವ ಕಾರ್ಯದಲ್ಲಿ ಮಾನವೀಯತೆ ಮೆರೆದ ನರಸಿಂಹಮೂರ್ತಿ ಅವರಿಗೆ ದೇವರು ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಕೀರ್ತಿ ನೀಡಲಿ. ಇಂತಹ ಮಾನವೀಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಹಾರೈಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST