Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಾಲಿನ ದರ ಹೆಚ್ಚಿಸಲು ಆಗ್ರಹಿಸಿ ‘ಬೆಂಗಳೂರು ಚಲೋ'

ಶಿರಾ : ರಾಜ್ಯಾದ್ಯಂತ ತೀವ್ರವಾಗಿ ಕಾಡುತ್ತಿರುವ ಬರಗಾಲದ ನಡುವೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಹಾಲು ಉತ್ಪಾದಕರ ನೆರವಿಗೆ ಧಾವಿಸಬೇಕಾದ ಸರ್ಕಾರ, ಹಾಲಿನ ದರ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ರಾಜ್ಯದ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಅಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನಿಂದ ಸುಮಾರು 2 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರು ಪಾಲ್ಗೊಳ್ಳಲು ಹೊರಟಿದ್ದೇವೆ ಎಂದು ತುಮುಲ್ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಅವರು ತಾಲ್ಲೂಕಿನ ದೊಡ್ಡಆಲದಮರ (ಹನುಮಂತ ನಗರ ) ದಲ್ಲಿ ರಾಜ್ಯಾದ್ಯಂತ ಹಾಲು ಉತ್ಪಾದಕರು ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಸೆ. 22 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ಹಾಲು, ನಮ್ಮ ಜೀವನೋಪಾಯ, ನಮ್ಮ ಹಕ್ಕು ಎಂಬ ದ್ಯೇಯ ವಾಕ್ಯದೊಂದಿಗೆ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 "ಇಂದು ಮಾರುಕಟ್ಟೆಯಲ್ಲಿ ಒಂದು ಲೀಟರ್ ಕುಡಿಯುವ ನೀರಿಗೆ 30 ರಿಂದ 40 ರೂಪಾಯಿ ಬೆಲೆ ಇದೆ. ಆದರೆ, ರೈತರು ಹಗಲಿರುಳು ಶ್ರಮಪಟ್ಟು ಉತ್ಪಾದಿಸುವ ಹಾಲಿಗೆ ಕೇವಲ 32 ರಿಂದ 36 ರೂಪಾಯಿ ಮಾತ್ರ ನಿಗದಿಪಡಿಸಲಾಗಿದೆ. ಇದು ಶ್ರಮಜೀವಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಆದ್ದರಿಂದ ತಕ್ಷಣವೇ ಹಾಲಿನ ದರವನ್ನು ಕನಿಷ್ಠ 5 ರೂ. ಗೆ ಹೆಚ್ಚಿಸಬೇಕು ಮತ್ತು ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 40 ರೂ.ಗೆ ನಿಗದಿಪಡಿಸಬೇಕು" ಸರ್ಕಾರ ಪ್ರಸ್ತುತ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನದ ಜೊತೆಗೆ ಹೆಚ್ಚುವರಿಯಾಗಿ 5 ರೂ. ಸೇರಿಸಿ, ಒಟ್ಟು 10 ರೂ. ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರಿಗೆ ನೀಡಬೇಕು, ಸಹಕಾರ ಸಂಘಗಳ ಕಾರ್ಯದರ್ಶಿಗಳ ಮೇಲಿನ ಕಾರ್ಯದೊತ್ತಡ ಹೆಚ್ಚಾಗಿದೆ. ಹಿಂದೆ ಸರ್ಕಾರ ಕಾರ್ಯದರ್ಶಿಗಳಿಗೆ ನೀಡುತ್ತಿದ್ದ 30 ಪೈಸೆ ಪ್ರೋತ್ಸಾಹ ಧನವನ್ನು ಈಗ ನಿಲ್ಲಿಸಲಾಗಿದೆ. ಅದನ್ನು ಮರುಪ್ರಾರಂಭಿಸಿ, ಪ್ರತಿ ಲೀಟರ್‌ಗೆ 50 ಪೈಸೆ ಪ್ರೋತ್ಸಾಹ ಧನವನ್ನು ಕಾರ್ಯದರ್ಶಿಗಳಿಗೂ ನೀಡಬೇಕು. ಜೊತೆಗೆ ಅವರ ಗೌರವಧನವನ್ನೂ ಹೆಚ್ಚಿಸಬೇಕು" ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರು,ಸಹಕಾರ ಸಂಘದ ಕಾರ್ಯದರ್ಶಿಗಳು, ರೈತ ನಾಯಕರು, ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

 ಒಕ್ಕೂಟಗಳಿಗೆ ಸ್ವಾಯತ್ತತೆ ನೀಡಿ:  "ಹಾಲು ಉತ್ಪಾದಕರ ಸಹಕಾರ ಸಂಘಗಳು, ಹಾಲಿನ ಒಕ್ಕೂಟಗಳು ಮತ್ತು ಮಹಾಮಂಡಳಕ್ಕೆ ಹಾಲಿನ ದರವನ್ನು ನಿರ್ಧರಿಸುವ ಸ್ವಾಯತ್ತತೆಯನ್ನು (Autonomy) ಸರ್ಕಾರ ನೀಡಬೇಕು. ದರ ಹೆಚ್ಚಳ ಮಾಡುವ ಶಕ್ತಿಯನ್ನು ಒಕ್ಕೂಟಗಳಿಗೆ ನೀಡದೆ, ಸರ್ಕಾರ ಪದೇ ಪದೇ ದರ ಏರಿಕೆಗೆ ತಡೆಹಿಡಿಯುತ್ತಿರುವುದು ಸರಿಯಲ್ಲ. ನಮ್ಮ ಹಾಲಿನ ದರವನ್ನು ನಾವೇ ನಿರ್ಧರಿಸುವ ಅಧಿಕಾರ ನಮಗೆ ಸಿಗಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ. - ಎಸ್. ಆರ್. ಗೌಡ, ತುಮುಲ್ ನಿರ್ದೇಶಕ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST