ಕಾರವಾರ: ಮೃತಪಟ್ಟ ಪತ್ನಿಯ ಸಹೋದರಿ ಮದುವೆಯಾಗಲು ಸಿದ್ಧತೆ ನಡೆಸಿದ ವೈದ್ಯನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆ.ಹೆಚ್.ಬಿ. ಕಾಲೋನಿ ಬಳಿ ಘಟನೆ ನಡೆದಿದೆ.
ಡಾ. ರಮೇಶ್ ಕಲಗುಟಕರ(51) ಕೊಲೆಯಾದವರು. 8 ತಿಂಗಳ ಹಿಂದೆ ಅವರ ಪತ್ನಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಒಬ್ಬರು ವೈದ್ಯರಾಗಿದ್ದರೆ, ಮತ್ತೊಬ್ಬರು ಎಂಜಿನಿಯರಿಂಗ್ ಓದುತ್ತಿದ್ದಾರೆ. ಮನೆಯಲ್ಲಿ ವಾಸವಾಗಿದ್ದ ರಮೇಶ್ ಪತ್ನಿಯ ಸಹೋದರಿಯನ್ನು ಏಪ್ರಿಲ್ 20ರಂದು ಸೋಮವಾರ ಮದುವೆಯಾಗಬೇಕಿತ್ತು.
ಮದುವೆಗಾಗಿ ಬ್ಯಾಂಕ್ ನಿಂದ ಚಿನ್ನದ ಒಡವೆಗಳನ್ನು ತಂದಿಟ್ಟಿದ್ದು, ಅವರನ್ನು ಯಾರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಶಶಿಕಾಂತ್ ಶರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.