ಪಾವಗಡ. ಪಾವಗಡ ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಕ್ಷೌರಿಕರ ದಿನಾಚರಣೆಯ ಅಂಗವಾಗಿ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಉದ್ಭವ ಕಣಿವೆ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿರಿಯ ಕ್ಷೌರಿಕರು ಮತ್ತು ಕಲಾವಿದರಿಗೆ ಗೌರವಿಸಿ "ಕ್ಷೌರಿಕ ರತ್ನ" ಮತ್ತು "ಕಲಾ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಮೊದಲಿಗೆ ಸಮಾಜದ ಮೂಲ ಪುರುಷ ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ವೇಳೆ ಸಮಾಜದ ಹಿರಿಯ ಮುಖಂಡರಾದ ಚಿನ್ನಪ್ಪ,, ಗೋಪಣ್ಣ, ಉಗ್ರಪ್ಪ, ಸಂಜೀವರಾಯ, ಕನುಮಪ್ಪ, ನಾಗಣ್ಣ, ಮಾರುತಿ ಪ್ರಸಾದ್, ನರೇಶ್, ಜಗನ್ನಾಥ ಮತ್ತು ಅನಿಲ್ ಅವರಿಗೆ ಶಾಲು ಹೊದಿಸಿ, ಕಲಾ ರತ್ನ, ಕ್ಷೌರಿಕಿರತ್ನ ಪ್ರಶಸ್ತಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಮಂಗಳವಾಡ ನಾಗರಾಜ ಎಸ್. ಅವರು, ಹಿಂದುಳಿದ ವರ್ಗಗಳಲ್ಲಿಯೇ ಅತ್ಯಂತ ಹಿಂದುಳಿದ ವರ್ಗವಾದ ಸವಿತಾ ಸಮಾಜದವರು ಸಂಘಟಿತರಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಉದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಣ್ಣಪ್ಪ, ನರಸಿಂಹಮೂರ್ತಿ, ಸಿದ್ದರಾಜು, ಮುರಳಿ, ಪ್ರಸನ್ನ, ಅಜಿತ್, ಮಾರುತಿ, ದಾಮೋದರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.