ಪಾವಗಡ: ನೇಣು ಬಿಗಿದು ಕೊಂಡು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪೊಲೀಸ್ ಠಾಣ ವ್ಯಾಪ್ತಿಯ ಆರ್. ಹೊಸಕೋಟೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ.
ಆರ್.ಹೊಸಕೋಟೆ ಗ್ರಾಮದ ಶಿವಣ್ಣ ಮತ್ತು ಗೀತಾ ದಂಪತಿಗಳ ಪುತ್ರಿ ಲಿಖಿತ ಎಂದು ಗುರುತಿಸಲಾಗಿದೆ, ಪಟ್ಟಣದ ಎಸ್. ಎಸ್. ಕೆ. ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ,
ಮನೆಯಲ್ಲಿ ಸ್ನಾನ ಮಾಡಲು ತೆರಳಿದ ಯುವತಿ ಎಷ್ಟು ಹೊತ್ತಾದರೂ ಬಾರದೆ ಇದ್ದು ಅನುಮಾನ ಗೊಂಡ ತಾಯಿ ಬಾಗಿಲು ತೆಗೆದಾಗ ಈ ಒಂದು ಕೃತ್ಯ ಬಯಲಾಗಿದೆ, ತಕ್ಷಣ ಪಾವಗಡ ಆಸ್ಪತ್ರೆಗೆ ರವಾನಿಸಿದರು ಆದರೆ ಆಸ್ಪತ್ರೆ ವೈದ್ಯರು ಮರಣ ಹೊಂದಿರುವುದಾಗಿ ಖಚಿತಪಡಿಸಿದ್ದಾರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.