Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿರಾದಲ್ಲಿ ಸೋಮವಾರ 'ಭದ್ರೆಗಾಗಿ' ಆಗ್ರಹ ಸಭೆ

ತುಮಕೂರು: ಜಿಲ್ಲೆಗೆ ಹಲವಾರು ನೀರಾವರಿ ಯೋಜನೆಗಳನ್ನು ಸರ್ಕಾರಗಳು ಘೋಷಿಸುತ್ತಿದ್ದರೂ ಸಮರ್ಪಕವಾಗಿ ಯಾವು ಕೂಡ ಅನುಷ್ಠಾನಕ್ಕೆ ಬರುತ್ತಿಲ್ಲ. ಅನುಷ್ಠಾನ ಬಯಸುವ ಹಿತಾಸಕ್ತಿಯ ರಾಜಕಾರಣವು ಜಿಲ್ಲೆಯಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಎತ್ತಿನಹೊಳೆ, ಹೇಮಾವತಿ, ಭದ್ರಾ ಮೇಲ್ದಂಡೆ ಹೀಗೆ ವಿವಿಧ ನೀರಾವರಿ ಹಂಚಿಕೆಗಳು ಜಿಲ್ಲೆಯ ವಿವಿಧ ಭಾಗಗಳಿಗೆ ವಿಸ್ತೃತವಾಗಿ ಯೋಜನೆ ರೂಪಗೊಂಡಿದ್ದರೂ, ಸಾವಿರಾರು ಕೋಟಿ ಹಣ ಇದಕ್ಕೆ ಮುಡುಪಾಗಿಟ್ಟಿದ್ದರೂ ಜಿಲ್ಲೆಯಲ್ಲಿ ನೀರಾವರಿ ಸಾರ್ಥಕತೆ ಕಾಣಲಾಗುತ್ತಲೇ ಇಲ್ಲ.

.
ಇಂಥ ಸಂದರ್ಭದಲ್ಲಿ ಎತ್ತಿನಹೊಳೆ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹಿಂದೆ ಬಿದ್ದು ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಮುರಳಿಧರ ಹಾಲಪ್ಪನವರ ಹೋರಾಟಕ್ಕೆ ಜಿಲ್ಲೆಯ ಸಮಸ್ಥರ ಪಕ್ಷಾತೀತ ಬೆಂಬಲ ಅತ್ಯಗತ್ಯ.
.
ವಿಶ್ವೇಶ್ವರಯ್ಯ ಜಲ ನಿಗಮದ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯುತ್ತಿರುವಂತೆಯೇ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ಹಾಗೂ ಪಾವಗಡಕ್ಕೂ ನೀರು ಬರಬೇಕು, ಅಲ್ಲಿನ ಕೃಷಿ ಭೂಮಿಯ ಜೊತೆಗೆ ಜನತೆಯ ಅವಶ್ಯಕತೆಯ ದಾಹವು ಶಾಶ್ವತವಾಗಿ ಪರಿಹಾರ ಕಾಣಬೇಕು ಎಂಬ ತುಡಿತದಿಂದ ಸೆಪ್ಟೆಂಬರ್ 28ರ ಸೋಮವಾರ ಬೆಳಗ್ಗೆ 10 ಗಂಟೆಗೆ ಶಿರಾ ನಗರದ ಭದ್ರಾ ಮೇಲ್ದಂಡೆ ಯೋಜನೆಯ ವಿಭಾಗೀಯ ಕಛೇರಿ ಮುಂಭಾಗ ಭದ್ರಗಾಗಿ ಆಗ್ರಹ ಸಭೆಯನ್ನ ಆಯೋಜಿಸಿದ್ದಾರೆ. ಈ ಭಾಗದ ರೈತರು ಚಿಂತಕರು ವಿಚಾರವಂತರು ಈ ಸಭೆಯಲ್ಲಿ ಭಾಗವಹಿಸಿ ಮುರುಳಿದರ ಹಾಲಪ್ಪನವರ ನೀರಾವರಿ ಹೋರಾಟಕ್ಕೆ ನೈತಿಕ ಬೆಂಬಲವನ್ನ ತುಂಬಬೇಕಿದೆ.
.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಒತ್ತಾಯ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2023-24ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಸದರಿ ಯೋಜನೆಗೆ ರೂ.5300 ಕೋಟಿಗಳ ಅನುದಾನವನ್ನು ಘೋಷಣೆ ಮಾಡಲಾಗಿರುತ್ತದೆ. ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಕ್ರಿಯೆ ವಿಳಂಭವಾಗಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಸದರಿ ರೂ.5,300 ಕೋಟಿಗಳ ಧನ ಸಹಾಯವನ್ನು Pradhana Mantri Krishi Sinchayee Yojana – Accelerated Irrigation Benefit Programme (PMKSY-AIBP)/National Project ಸ್ಕೀಂ ಅಡಿ ಬಿಡುಗಡೆಗೊಳಿಸಲು ದಿ:16.08.2023, ದಿ:19.06.2024, ದಿ:03.08.2024 ಮತ್ತು ದಿ:28.10.2024ರ ಪತ್ರಗಳಲ್ಲಿ ಕಾರ್ಯದರ್ಶಿಗಳು, ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಈ ಕುರಿತು ನೀರಾವರಿ ಹೋರಾಟ ಸಮಿತಿವತಿಯಿಂದ ಸನ್ಮಾನ್ಯ ಕೇಂದ್ರ ಸಚಿವರು, ಜಲಶಕ್ತಿ ಸಚಿವಾಲಯ, ಭಾರತ ಸರ್ಕಾರ ಇವರೊಂದಿಗೆ ದಿ:25.02.2025 ರಂದು & 30.05.26 ರಂದು ಬೇಟಿ ಮಾಡಿ ಆಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಕರ್ನಾಟಕ ನ್ಯೂಸ್ ನೆಟ್ ಜೊತೆ ಮುರುಳಿದರ ಹಾಲಪ್ಪ ಅವರು ಹಂಚಿಕೊಂಡಿದ್ದಾರೆ.
.
ಭದ್ರಾ ಮೇಲ್ದಂಡೆ ಯೋಜನೆಯ ಉದ್ದೇಶ: ಭದ್ರಾ ಮೇಲ್ದಂಡೆ ಯೋಜನೆಯನ್ನು ಮಧ್ಯ ಕರ್ನಾಟಕದ  ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 2,25,515 ಹೆಕ್ಟೇರ್ (5,57,022 ಎಕರೆ) ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ದತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ಇದೇ ಜಿಲ್ಲೆಗಳ 367 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ನೀರನ್ನು ತುಂಬಿಸಲು ಉದ್ದೇಶಿಸಿ ರೂಪಿಸಲಾಗಿರುತ್ತದೆ.

.

ನೀರಿನ ಹಂಚಿಕೆ: ಭದ್ರಾ ಮೇಲ್ದಂಡೆ ಯೋಜನೆಗೆ 29.90 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಲಾಗಿರುತ್ತದೆ.
ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಲು : 21.90 ಟಿ.ಎಂ.ಸಿ. 
ಕೆರೆ ತುಂಬಿಸಲು : 6.00 ಟಿ.ಎಂ.ಸಿ.
ವಾಣಿ ವಿಲಾಸ ಸಾಗರ : 2.00 ಟಿ.ಎಂ.ಸಿ.
ಒಟ್ಟು: 20 ಟಿ.ಎಂ.ಸಿ.

.

ಆಡಳಿತಾತ್ಮಕ ಅನುಮೋದನೆ: ಭದ್ರಾ ಮೇಲ್ದಂಡೆ ಯೋಜನೆಯ ರೂ.21473.67 ಕೋಟಿಗಳ ಮೊತ್ತದ ಪುನರ್ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರವು ಆದೇಶ ಸಂಖ್ಯೆ: WRD 166 VBYE 2020 Bangalore dated :16.12.2020 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

.

ಪಾವಗಡ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ: ಚಿತ್ರದುರ್ಗ ಶಾಖಾ ಕಾಲುವೆಯ ಚೈ:132.05 ಕಿ.ಮೀ ನಿಂದ ಕವಲೊಡೆಯುವ ಫೀಡರ್ ಪೈಪ್‌ಲೈನ್ ಮೂಲಕ ಪಾವಗಡ ತಾಲ್ಲೂಕಿನ 30 ಕೆರೆಗಳನ್ನು ತುಂಬಿಸಲು ರೂ.656.31 ಕೋಟಿಗಳ ಮೊತ್ತದ ಪ್ಯಾಕೇಜ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

.

ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು: ತುಮಕೂರು ಶಾಖಾ ಕಾಲುವೆಯ ಚೈ:113.329 ಕಿಮೀ ನಿಂದ ಫೀಡರ್ ಪೈಪಲೈನ್ ಮೂಲಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 19 ಕೆರೆಗಳನ್ನು ತುಂಬಿಸುವ ರೂ.73.48 ಕೋಟಿಗಳ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ ಹಾಗೂ ತುಮಕೂರು ಶಾಖಾ ಕಾಲುವೆಯ ಚೈ:159.180 ಕಿಮೀ ನಿಂದ ಕವಲೊಡೆಯುವ ಫೀಡರ್ ಪೈಪ್‌ಲೈನ್ ಮೂಲಕ ಶಿರಾ-ಹಿರಿಯೂರು ತಾಲ್ಲೂಕಿನ 41 ಕೆರೆಗಳನ್ನು ತುಂಬಿಸುವ ರೂ.1215.21 ಕೋಟಿ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

.

ಆರ್ಥಿಕ ಪ್ರಗತಿ:   ಸದರಿ ಯೋಜನೆಗಾಗಿ 2025-26ನೇ ಸಾಲಿನಲ್ಲಿ ರೂ.1440.29 ಕೋಟಿಗಳ ಅನುದಾನ ಹಂಚಿಕೆಯಾಗಿದ್ದು, ಫೆಬ್ರವರಿ-2026ರ ಅಂತ್ಯಕ್ಕೆ ಒಟ್ಟಾರೆ ಸಂಚಿತ ರೂ.11,375.02    ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ.    ಸದರಿ ಯೋಜನೆಯನ್ನು 2027-28ನೇ ಸಾಲಿನಲ್ಲಿ ದಿನಾಂಕ:31.03.2028ರ ಅಂತ್ಯಕ್ಕೆ ಅನುದಾನದ ಲಭ್ಯತೆಗೆ ಅನುಗುಣವಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST