Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೆತ್ತವರ ತ್ಯಾಗ, ಋಣ ಮರೆಯಬಾರದು

52ನೇ ಜನ್ಮ ದಿನಾಚರಣೆಯಲ್ಲಿ ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಮನವಿ

ಹಸಿರು ಕ್ರಾಂತಿ ವರದಿ ಬೆಳಗಾವಿ
ಹೆತ್ತವರ ತ್ಯಾಗ ಮತ್ತು ಋಣವನ್ನು ಮರೆಯಬಾರದು. ತಂದೆ-ತಾಯಿಗಳಿಗೆ ವಯಸ್ಸಾದಾಗ ಅವರ ಆರೈಕೆ ಮಾಡುವುದು ಮಕ್ಕಳ ನೈತಿಕ ಕರ್ತವ್ಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ, ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.

52ನೇ ಜನ್ಮದಿನ ನಿಮಿತ್ತ ನಗರದ ಹೊರವಲಯದಲ್ಲಿರುವ ನಾಗನೂರು ಶಿವಬಸವ ಸ್ವಾಮೀಜಿ ವೃದ್ಧಾಶ್ರಮಕ್ಕೆ ದಂಪತಿ ಸಮೇತ ಭೇಟಿ ನೀಡಿ ಅಲ್ಲಿನ ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ಹೆತ್ತವರನ್ನು ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳಿಗಾಗಿ ಬದುಕು ಸವೆಸಿದ ತಂದೆ-ತಾಯಿಗಳು ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯುವ ಪರಿಸ್ಥಿತಿ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತದೆ ಎಂದರು.

ಮನೆಯಲ್ಲಿ ಹಿರಿಯರು ಇದ್ದರೇ ಆ ಮನೆಯೇ ನಿಜವಾದ ಸಂಪತ್ತಿನಿಂದ ಕೂಡಿರುತ್ತದೆ. ಹತ್ತು ಮಕ್ಕಳನ್ನು ಸಾಕಿ, ಸಲುಹಿ, ಅವರಿಗೆ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ತಲುಪಿಸುವ ಶಕ್ತಿ ತಂದೆ-ತಾಯಿಗಿದೆ. ತಮ್ಮ ಸುಖ, ಸಂತೋಷಗಳನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಇಡೀ ಜೀವನವನ್ನೇ ಸವೆಸಿದ ತಂದೆ-ತಾಯಿಗಳು ಮಕ್ಕಳು ವಿದ್ಯಾವಂತರಾಗಿ ವಿದೇಶಗಳಿಗೆ ಹಾರಿದ ನಂತರ ವೃದ್ಧಾಶ್ರಮಗಳಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಜನ್ಮದಿನದ ನಿಮಿತ್ತ ಮಾರಿಹಾಳ, ಸುಳೆಭಾವಿ, ಮೊದಗಾ ಹಾಗೂ ಬೆಳಗಾವಿ ನಗರದಲ್ಲಿ ಅವರ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ್ಮದಿನಕ್ಕೆ ಶುಭಹಾರೈಸಿದರು. 

ಈ ಸಂದರ್ಭದಲ್ಲಿ ಎಫ್.ಎಸ್.ಸಿದ್ದನಗೌಡರ, ನೀತಿನ ಚೌಗಲೆ, ಬಸವರಾಜ ರೇವಡಿ, ಡಾ.ಗುರುಪ್ರಸಾದ ಕೋತಿನ, ವೀರಭದ್ರ ಪೂಜೇರ, ಉಮೇಶ ಮಲ್ಲನ್ನವರ, ವಿನಯ್ ಪಚ್ಚಾಪುರ, ಸಿದ್ದಯ್ಯ ಪೂಜಾರ, ಫಕೀರಪ್ಪ ತಳವಾರ, ಮಾಂತೇಶ ಪೂಜಾರ, ಅಪ್ಪನ ಹಿತ್ತಲಮನಿ, ನಾರಾಯಣ ಜಾನಕಿ, ವಿಠ್ಠಲ ಕಲ್ಲನ್ನವರ,  ಪ್ರಶಾಂತ ಸೋಗಲಿ, ರಮೇಶ ಸರೋದೆ, ಶಿವು ಸೊಲಬನ್ನವರ, ಮಾರುತಿ ಮುಗಳಿ, ವಿಜಯ ಜಾಧವ, ಗುರುನಾಥ ಅತ್ತೆಂಗೆಹಾಳ, ಮಲ್ಲೇಶಿ ಕಲ್ಲನ್ನವರ, ಬಾಳೆಶಿ ಕಲ್ಲನ್ನವರ, ಈರಯ್ಯ ಅಲ್ಲಯ್ಯನವರಮಠ,‌ ಕಾರ್ತಿಕ ಮಾದಮ್ಮನವರ ಸೇರುದಂತೆ‌ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.


ಜನ್ಮದಿನವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ನಮ್ಮ ಸಂತೋಷವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಅವಕಾಶ. ಹಿರಿಯರೊಂದಿಗೆ ಸಮಯ ಕಳೆಯುವುದು, ಅವರ ಮುಖದಲ್ಲಿ ಮಂದಹಾಸ ಮೂಡಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ನನಗೆ ನಿಜವಾದ ಸಂತೋಷ ನೀಡಿದೆ. ಸಮಾಜದಲ್ಲಿ ಪ್ರೀತಿ, ಮಾನವೀಯತೆ ಮತ್ತು ಪರಸ್ಪರ ಕಾಳಜಿಯ ಮೌಲ್ಯಗಳು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಹಿರಿಯರೊಂದಿಗೆ ಆಚರಿಸಿದ್ದೇನೆ.
-ಮಲ್ಲಿಕಾರ್ಜುನ ಮಾದಮ್ಮನವರ, ಅಧ್ಯಕ್ಷರು, ಪಿಕೆಪಿಎಸ್ ಮಾರಿಹಾಳ.

ಕಷ್ಟಗಳನ್ನು ಮೆಟ್ಟಿ ನಿಂತು, ಕಾರ್ಮಿಕನಾಗಿ ಜೀವನ ಆರಂಭಿಸಿ, ಸ್ವಂತ ಉದ್ಯಮದ ಮೂಲಕ ಆರ್ಥಿಕವಾಗಿ ಸಬಲರಾಗಿ, ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಮಾದಮ್ಮನವರವರು ತಮ್ಮ ಜನ್ಮದಿನವನ್ನು ಸಮಾಜಮುಖಿ ಕಾರ್ಯದ ಮೂಲಕ ಸ್ಮರಣಿಯವಾಗಿಸಿಕೊಂಡರು.
ಮಲ್ಲಿಕಾರ್ಜುನ ಮಾದಮ್ಮನವರ ಹಾಗೂ ಅವರ ಪತ್ನಿಯಾದ ಉಮಾ ಸೇರಿಕೊಂಡು ಹಿರಿಯರೊಂದಿಗೆ ಉಪಾಹಾರ ಸೇವಿಸಿ, ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಅವರು ಹಿರಿಯರ ಬಗ್ಗೆ ಗೌರವ, ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶವನ್ನು ಇಂತಹ ಯಾಂತ್ರಿಕ ಕಾಲದಲ್ಲಿ ಸಾರಿದ್ದು ಮನ ಮುಟ್ಟುವಂತಿದೆ.
-ಎಫ್.ಎಸ್.ಸಿದ್ದನಗೌಡರ, ರಾಜ್ಯ ಬಿಜೆಪಿ ಮಾಧಮ ಸಮಿತಿ ಸದಸ್ಯರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ