ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ 168 ಜಾನುವಾರು ಕಾಲೊನಿಗಳಲ್ಲಿರುವ ಸುಮಾರು 50 ಲಕ್ಷ ಪಶುಗಳ ಮೇಲೆ ಗೋಬರ್ ತೆರಿಗೆ (Dung Tax) ವಿಧಿಸಿರುವುದರಿಂದ, ಇದನ್ನು “ಸೆಗಣಿ ತೆರಿಗೆ” ಎಂದು ಕರೆಯುತ್ತಾ ಪಾಕಿಸ್ತಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ‘ಸೂತ್ರ ಪಂಜಾಬ್’ ಯೋಜನೆಯಡಿ ಜೈವಿಕ ಅನಿಲ ಕಾರ್ಯಕ್ರಮಕ್ಕಾಗಿ ಪ್ರತಿ ಪಶುವಿಗೆ ದಿನಕ್ಕೆ 30 ರೂ. ತೆರಿಗೆ ವಿಧಿಸುವಂತೆ ಆದೇಶಿಸಿದ್ದಾರೆ. ಈ ಕ್ರಮದ ಮೂಲಕ ಸರ್ಕಾರ ಕೋಟಿ ರೂಪಾಯಿಗಳ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಈ ನಡುವೆ ತೆರಿಗೆ ತಪ್ಪಿಸಲು ಮಾಲೀಕರು ವಿಚಿತ್ರ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ತಮ್ಮ ಪಶುಗಳಿಗೆ ಶೂನ್ಯ ತ್ಯಾಜ್ಯ ಆಹಾರ ನೀಡುತ್ತಿದ್ದರೆ, ಇನ್ನೂ ಕೆಲವರು ಡೈಪರ್ ಧರಿಸುವಂತೆ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದ್ದು, “ಜಾನುವಾರುಗಳ ಮಲದ ಮೇಲೆ ತೆರಿಗೆ ವಿಧಿಸಿದರೆ, ಮಾನವ ಮಲದ ಮೇಲೂ ಏಕೆ ತೆರಿಗೆ ವಿಧಿಸಬಾರದು?” ಎಂಬ ವ್ಯಂಗ್ಯಪ್ರಶ್ನೆಗಳ ಮೂಲಕ ಸರ್ಕಾರವನ್ನು ಟೀಕಿಸಲಾಗುತ್ತಿದೆ.