Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ - ಡಾ. ಟಿ.ವಿ. ಕುಮಾರ್

ಶಿರಾ: ನವ್ಯದಿಶ ಸಂಸ್ಥೆ ಹಾಗೂ ಸಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ   ಮಾನಸಿಕ ಆರೋಗ್ಯ ಮತ್ತು ಯುವಜನರು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ಮನಃಶಾಸ್ತ್ರಙ್ಞರಾದ  ಡಾ. ಟಿ.ವಿ.ಕುಮಾರ್ ರವರು ವಿದ್ಯಾರ್ಥಿಗಳೊಂದಿಗೆ  ಸಂವಾದ ನಡೆಸುತ್ತಾ,  ಮಾನಸಿಕ ಸಮಸ್ಯೆಗಳೆಂದರೆ ಬಲಹೀನತೆಯಲ್ಲ, ಶೀತ ಅಥವಾ ಜ್ವರ ಬಂದರೆ ನಾವು ಹೇಗೆ ವೈದ್ಯರ ಬಳಿ ಹೋಗುತ್ತೇವೆಯೋ, ಹಾಗೆಯೇ ಮನಸ್ಸಿಗೆ ಬೇಸರ, ಆತಂಕ ಅಥವಾ ಗೊಂದಲ ಉಂಟಾದಾಗ ಅದನ್ನು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಮಾನಸಿಕ ಆರೋಗ್ಯ ಎಂದರೆ "ಕೇವಲ ರೋಗ ಅಥವಾ ದೌರ್ಬಲ್ಯ ಇಲ್ಲದಿರುವುದಷ್ಟೇ ಅಲ್ಲ, ಬದಲಾಗಿ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಂಪೂರ್ಣವಾಗಿ ಸ್ವಸ್ಥವಾಗಿರುವ ಸ್ಥಿತಿ". ವಿಶ್ವದಾದ್ಯಂತ 10 ರಿಂದ 19 ವರ್ಷದ ಪ್ರತಿ 7 ಯುವಜನರಲ್ಲಿ ಒಬ್ಬರು ಯಾವುದಾದರೂ ಒಂದು ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಯುವಜನರಲ್ಲಿ ಖಿನ್ನತೆ, ಆತಂಕ ಮತ್ತು ವರ್ತನೀಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಯುವಜನರ ಸಾವುಗಳಿಗೆ ಆತ್ಮಹತ್ಯೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಇದಕ್ಕೆ ಸೂಕ್ತ ಸಮಯದಲ್ಲಿ ಜಾಗೃತಿ ಮತ್ತು ಆಪ್ತಸಮಾಲೋಚನೆ ಪಡೆದುಕೊಳ್ಳುವುದು ಅತ್ಯಗತ್ಯ. ನಿಮ್ಮ ಮನಸ್ಸಿನ ಭಾವನೆಗಳನ್ನು, ನೋವುಗಳನ್ನು ನಿಮ್ಮ ಹೆತ್ತವರೊಂದಿಗೆ, ನೆಚ್ಚಿನ ಶಿಕ್ಷಕರೊಂದಿಗೆ ಅಥವಾ ನಂಬಿಕಸ್ಥ ಸ್ನೇಹಿತರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕಿದೆ. ಮನಸ್ಸನ್ನು ಬಂಧಿಯಾಗಿಸದೇ ಮುಕ್ತವಾಗಿಡಬೇಕು. ನಿಮ್ಮಲ್ಲಿ ಅಪಾರ ಸಾಮರ್ಥ್ಯವಿದೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು  ಮುನ್ನಡೆಯಬೇಕಿದೆ. ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ಸೂಚಿಸಿದರು.
ಕಾರ್ಯಕ್ರಮದಲ್ಲಿ ನವ್ಯದಿಶದ ಕಾರ್ಯಕ್ರಮ‌ ಸಂಯೋಜಕರಾದ ಮಂಜುನಾಥ್ ಅಮಲಗೊಂದಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಇಂದಿನ ಗಡಿಬಿಡಿಯ ಜೀವನದಲ್ಲಿ ನಾವು ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಗಮನವನ್ನು ನಮ್ಮ ಮಾನಸಿಕ ಆರೋಗ್ಯಕ್ಕೆ ಕೊಡುತ್ತಿಲ್ಲ. ವಿಶೇಷವಾಗಿ ಪದವಿ ಪೂರ್ವ ಶಿಕ್ಷಣ ಹಂತದಲ್ಲಿರುವ ಯುವಜನರು ತಮ್ಮ ಭವಿಷ್ಯ, ಪರೀಕ್ಷೆ, ಅಂಕಗಳ ಒತ್ತಡ, ಸ್ನೇಹಿತರ ವಾತಾವರಣ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಅನೇಕ ರೀತಿಯ ಗೊಂದಲ ಮತ್ತು ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಮಾನಸಿಕ ಸಮಸ್ಯೆ ಎಂದರೆ ಅದು ಕೇವಲ ಹುಚ್ಚುತನವಲ್ಲ, ದೈಹಿಕವಾಗಿ ಜ್ವರ ಬಂದಂತೆ ಮನಸ್ಸಿಗೂ ಆಯಾಸವಾಗುವುದು ತೀರಾ ಸಹಜ ಎಂಬುದನ್ನು ಯುವಜನರಿಗೆ ತಿಳಿಸಿಕೊಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಾನಸಿಕವಾಗಿ ಸಬಲರಾದ ಯುವಜನತೆಯೇ ಈ ದೇಶದ ಅತಿದೊಡ್ಡ ಆಸ್ತಿ. ಈ ಕಾರ್ಯಕ್ರಮವು ನಿಮ್ಮ ಜೀವನದಲ್ಲಿ ಹೊಸ ಭರವಸೆ ಮತ್ತು ಸಕಾರಾತ್ಮಕ ಬದಲಾವಣೆಗೆ ದಾರಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಫಾಲರಾದ ಧನಶಂಕರ್ ರವರು ಮಾತನಾಡುತ್ತಾ, ಇಂದು ನಮ್ಮ ಕಾಲೇಜಿನಲ್ಲಿ ನವ್ಯದಿಶ ಸಂಸ್ಥೆಯಿಂದ  ‘ಮಾನಸಿಕ ಆರೋಗ್ಯ ಮತ್ತು ಯುವಜನರು’ ಎಂಬ ಅತ್ಯಂತ ಪ್ರಸ್ತುತ ಹಾಗೂ ಮಹತ್ವದ ವಿಷಯದ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವೆಲ್ಲರೂ ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೆ ಕೊಡುತ್ತಿಲ್ಲ ಎಂಬುದು ಸತ್ಯ. "ಆರೋಗ್ಯಕರ ಮನಸ್ಸಿನಲ್ಲಿ ಆರೋಗ್ಯಕರ ದೇಹವಿರುತ್ತದೆ" ಎಂಬ ನಾಣ್ಣುಡಿಯಂತೆ, ಮನಸ್ಸು ಸ್ವಸ್ಥವಾಗಿದ್ದರೆ ಮಾತ್ರ ನಾವು ಜೀವನದಲ್ಲಿ ಎಂತಹ ಸವಾಲುಗಳನ್ನಾದರೂ ಎದುರಿಸಲು ಸಾಧ್ಯ. ಆಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಗ್ರಂಥಪಾಲಕರಾದ ಕುಮಾರ್,  ಉಪನ್ಯಾಸಕರ ರೂಪ, ಬಸವರಾಜು ರವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST