Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Business News

ಚಿನ್ನದ ದರದಲ್ಲಿ ಕುಸಿತ: 2 ದಿನಗಳಲ್ಲಿ ₹160 ಇಳಿಕೆ

ಬೆಂಗಳೂರು, ಮೇ 5: ಚಿನ್ನದ ದರ ಇಂದಿಗೂ ಇಳಿಕೆಯ ಹಾದಿಯಲ್ಲೇ ಮುಂದುವರಿದಿದೆ. ನಿನ್ನೆ ಗ್ರಾಮ್‌ಗೆ ₹120 ಕುಸಿದಿದ್ದ ಬಂಗಾರದ ಬೆಲೆ ಇಂದು ಮಂಗಳವಾರ ಮತ್ತಷ್ಟು ₹40 ಇಳಿಕೆ ಕಂಡಿದೆ. ಅಪರಂಜಿ ಚಿನ್ನದ ದರ ಮತ್ತೆ ₹15,000 ಗಡಿಯೊಳಗೆ ಸರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆ ಸಡಿಲವಾಗಿದೆ. ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಮ್‌ಗೆ ₹10 ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ₹265ರಿಂದ ₹255ಕ್ಕೆ ಇಳಿದಿದೆ. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,36,750 ಆಗಿದ್ದು, 24 ಕ್ಯಾರಟ್ ಚಿನ್ನದ ದರ ₹1,49,180 ಇದೆ. 100 ಗ್ರಾಂ ಬೆಳ್ಳಿ ಬೆಲೆ ₹25,500 ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ ₹1,36,750 ಮತ್ತು ಬೆಳ್ಳಿ 100 ಗ್ರಾಂಗೆ ₹25,500 ಇದೆ. ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ₹26,500 ಮಟ್ಟದಲ್ಲಿ ಇದೆ.

ಭಾರತದಲ್ಲಿ ಮೇ 5ರ ಚಿನ್ನ-ಬೆಳ್ಳಿ ದರ ವಿವರಗಳು: 24 ಕ್ಯಾರಟ್ ಚಿನ್ನದ 1 ಗ್ರಾಂ ₹14,918, 22 ಕ್ಯಾರಟ್ ₹13,675 ಮತ್ತು 18 ಕ್ಯಾರಟ್ ₹11,189 ಆಗಿದೆ. ಬೆಳ್ಳಿ ದರ 1 ಗ್ರಾಂಗೆ ₹255 ಇದೆ. ಬೆಂಗಳೂರಿನಲ್ಲಿ ಇದೇ ದರಗಳು ಅನ್ವಯವಾಗುತ್ತಿವೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ): ಬೆಂಗಳೂರು ₹13,675, ಚೆನ್ನೈ ₹13,820, ಮುಂಬೈ ₹13,675, ದೆಹಲಿ ₹13,690, ಕೋಲ್ಕತಾ ₹13,675, ಕೇರಳ ₹13,675, ಅಹ್ಮದಾಬಾದ್ ₹13,680, ಜೈಪುರ್ ₹13,690, ಲಕ್ನೋ ₹13,690, ಭುವನೇಶ್ವರ್ ₹13,675.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ): ಮಲೇಷ್ಯಾ 553 ರಿಂಗಿಟ್ (₹13,303), ದುಬೈ 502.25 ಡಿರಾಮ್ (₹13,041), ಅಮೆರಿಕ 142.50 ಡಾಲರ್ (₹13,590), ಸಿಂಗಾಪುರ 180.80 ಡಾಲರ್ (₹13,501), ಕತಾರ್ 507.50 ರಿಯಾಲ್ (₹13,277), ಸೌದಿ ಅರೇಬಿಯಾ 512 ರಿಯಾಲ್ (₹13,018), ಓಮನ್ 54.05 ರಿಯಾಲ್ (₹13,387), ಕುವೇತ್ 41.66 ದಿನಾರ್ (₹12,970).

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂಗೆ): ಬೆಂಗಳೂರು ₹255, ಚೆನ್ನೈ ₹265, ಮುಂಬೈ ₹255, ದೆಹಲಿ ₹255, ಕೋಲ್ಕತಾ ₹255, ಕೇರಳ ₹265, ಅಹ್ಮದಾಬಾದ್ ₹255, ಜೈಪುರ್ ₹255, ಲಕ್ನೋ ₹255, ಭುವನೇಶ್ವರ್ ₹265, ಪುಣೆ ₹255.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ