Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಗಿಲ್-ಸುದರ್ಶನ್ ಜೋಡಿಯ ದಾಂಡಿಗಾಟಕ್ಕೆ ಗೇಲ್-ಕೊಹ್ಲಿ ದಾಖಲೆ ಧ್ವಂಸ

ಚಂಢೀಗಡ: ಕ್ವಾಲಿಫೈಯರ್-2 ಪಂದ್ಯದಲ್ಲಿ Rajasthan Royals ವಿರುದ್ಧ ಭರ್ಜರಿ ಜಯ ಸಾಧಿಸಿದ Gujarat Titans ಮೂರನೇ ಬಾರಿ ಐಪಿಎಲ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ನಾಯಕ Shubman Gill ನೇತೃತ್ವದಲ್ಲಿ ಜಿಟಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಈ ಗೆಲುವಿಗಿಂತಲೂ ಹೆಚ್ಚು ಚರ್ಚೆಯಾಗುತ್ತಿರುವುದು ಗಿಲ್ ಹಾಗೂ Sai Sudharsan ಜೋಡಿಯ ಸ್ಫೋಟಕ ಜೊತೆಯಾಟ.

ಜಿಟಿ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 167 ರನ್‌ಗಳ ಅದ್ಭುತ ಜೊತೆಯಾಟ ಕಟ್ಟಿದರು. ಟಿ20 ಕ್ರಿಕೆಟ್‌ನಲ್ಲಿ ಈ ಜೋಡಿ ದಾಖಲಿಸಿದ 11ನೇ ಶತಕದ ಜೊತೆಯಾಟ ಇದಾಗಿದ್ದು, ಈ ಮೂಲಕ Virat Kohli ಹಾಗೂ Chris Gayle ಅವರ ದಾಖಲೆ ಹಿಂದಿಕ್ಕಲಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟಗಳ ಪಟ್ಟಿಯಲ್ಲಿ ಇದೀಗ ಗಿಲ್–ಸುದರ್ಶನ್ ಜೋಡಿ ಅಗ್ರಸ್ಥಾನಕ್ಕೇರಿದೆ. 48 ಇನ್ನಿಂಗ್ಸ್‌ಗಳಲ್ಲಿ 11 ಶತಕದ ಜೊತೆಯಾಟವಾಡಿರುವ ಈ ಜೋಡಿ, 63 ಇನ್ನಿಂಗ್ಸ್‌ಗಳಲ್ಲಿ 10 ಶತಕಗಳ ಜೊತೆಯಾಟವಾಡಿದ್ದ ಗೇಲ್–ಕೊಹ್ಲಿ ಜೋಡಿಯನ್ನು ಮೀರಿಸಿದೆ. ಈ ಪಟ್ಟಿಯಲ್ಲಿ Babar Azam–Mohammad Rizwan ಹಾಗೂ AB de Villiers–ಕೊಹ್ಲಿ ಜೋಡಿಗಳು ಕೂಡ 10 ಶತಕದ ಜೊತೆಯಾಟಗಳೊಂದಿಗೆ ಸ್ಥಾನ ಪಡೆದಿವೆ.

ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟವನ್ನು ಗಿಲ್ ಮತ್ತು ಸುದರ್ಶನ್ ಎಂಟು ಬಾರಿ ನಿರ್ಮಿಸಿದ್ದು, ಪುರುಷರ ಟಿ20 ಕ್ರಿಕೆಟ್‌ನಲ್ಲಿ Mohammad Rizwan ಮತ್ತು Babar Azam ದಾಖಲಿಸಿದ್ದ ಸಾಧನೆಯನ್ನು ಸಮಬಲಗೊಳಿಸಿದೆ.

ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೂ ಗಿಲ್–ಸುದರ್ಶನ್ ಜೋಡಿ ಹೊಸ ದಾಖಲೆ ಬರೆದಿದೆ. 2011ರ ಫೈನಲ್‌ನಲ್ಲಿ Michael Hussey ಹಾಗೂ Murali Vijay ನಿರ್ಮಿಸಿದ್ದ 159 ರನ್‌ಗಳ ಜೊತೆಯಾಟವನ್ನು ಮೀರಿಸಿ, ಇದೀಗ 167 ರನ್‌ಗಳ ಜೊತೆಯಾಟದೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಐಪಿಎಲ್ ಪ್ಲೇಆಫ್‌ಗಳಲ್ಲಿ ಅತ್ಯಧಿಕ ಜೊತೆಯಾಟಗಳ ಪಟ್ಟಿಯಲ್ಲಿ ಗಿಲ್–ಸುದರ್ಶನ್ ಜೋಡಿ ಅಗ್ರಸ್ಥಾನಕ್ಕೇರಿದೆ. ಇವರ ನಂತರ ಹಸ್ಸಿ–ಮುರುಳಿ ವಿಜಯ್, ಹಸ್ಸಿ–Suresh Raina, ಗಿಲ್–ಸುದರ್ಶನ್‌ರ ಮತ್ತೊಂದು ಜೊತೆಯಾಟ ಹಾಗೂ Manvinder Bisla–Jacques Kallis ಜೋಡಿಗಳು ಸ್ಥಾನ ಪಡೆದಿವೆ.

215 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಪರ ಗಿಲ್ ಹಾಗೂ ಸುದರ್ಶನ್ ಕೇವಲ 77 ಎಸೆತಗಳಲ್ಲಿ 167 ರನ್ ಕಲೆಹಾಕಿ ತಂಡಕ್ಕೆ ಗಟ್ಟಿ ಅಡಿಪಾಯ ಹಾಕಿದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಬಾರಿಸಿ Brijesh Sharma ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಗಿಲ್ 53 ಎಸೆತಗಳಲ್ಲಿ 104 ರನ್ ಸಿಡಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಕೊನೆಯಲ್ಲಿ Jofra Archer ವಿಕೆಟ್ ಪಡೆದರೂ, ಈ ಜೋಡಿಯ ಅಮೋಘ ಜೊತೆಯಾಟದ ನೆರವಿನಿಂದ ಗುಜರಾತ್ 8 ಎಸೆತಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ