Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾಮಾನ್ಯ ಸಭೆ ಸ್ಥಗಿತ; ಗಲಾಟೆ ತಪ್ಪಿಸಲು ಪೊಲೀಸರ ಹರಸಾಹಸ

ಕೊರಟಗೆರೆ: ತಾಲ್ಲೂಕಿನ ಮಾವತ್ತೂರು ವಿಎಸ್‌ಎಸ್‌ಎನ್ ನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯ ಪರ ಮತ್ತು ವಿರೋಧ ಗುಂಪುಗಳ ನಡುವಿನ ಜಗಳದಲ್ಲಿ ಸಾಮಾನ್ಯ ಸಭೆ  ನಿಂತು ಹೋಗಿದ್ದು ಗಲಾಟೆ ತಪ್ಪಿಸಲು ಪೊಲೀಸರು ಹರ ಸಾಹಸ ಪಟ್ಟರು.

ಗುರುವಾರ ಮಾವತ್ತೂರು ವಿಎಸ್‌ಎಸ್‌ಎನ್ ಅವರಣದಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿತ್ತು, ಸಭೆಯಲ್ಲಿ ಸಂಘದ ಮಾಜಿ ಅದ್ಯಕ್ಷ ಧನಂಜಯ ಮತ್ತು ಹಲವು ಶೇರುದಾರರು ಸಂಘದ ಕಾರ್ಯದರ್ಶಿ ತಿಮ್ಮಯ್ಯ ಸುಮಾರು ಎರಡು ತಿಂಗಳುಗಳಿಂದ ಸಹಕಾರ ಸಂಘದ ಕಚೇರಿಗೆ ಕೆಲಸಕ್ಕೆ ಬಂದಿಲ್ಲ, ಹಾಜರಾತಿ ಬುಕ್ಕಿಗೆ ಸಹಿ ಹಾಕಿಲ್ಲ ತಿಮ್ಮಯ್ಯ ಅವರ ಮಗ ಯಶವಂತ್‌ನನ್ನು ಇದೇ ವಿಎಸ್‌ಎಸ್‌ಎನ್ ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ, ಕಾರ್ಯದರ್ಶಿ ತಿಮ್ಮಯ್ಯ ಅವರ ಮಗ ಯಶವಂತ್ ಇಬ್ಬರು ಸೇರಿ ಕಾರ್ಯದರ್ಶಿ ತಿಮ್ಮಯ್ಯ ಕೆಲಸ ಮಾಡದೆ ಇರುವ ದಿನಗಳನ್ನು ಸೇರಿಸಿ ಕಾನೂನು ಬಾಹಿರವಾಗಿ ಸಂಬಳ ಮಾಡಿಕೊಂಡಿದ್ದು ಇದರ ಬಗ್ಗೆ ಡಿಆರ್ ಮತ್ತು ಎಆರ್ ದೂರು ನೀಡಿಲಾಗಿದೆ ಇದರ ತನಿಖೆ ಅದ ಮೇಲೆ ಸಭೆ ಮಾಡಿ ಎಂದು ಏರು ಧ್ವನಿಯಲ್ಲಿ ಗಲಾಟೆ ಮಾಡಿದರು.

ಇದಕ್ಕೆ ಕಾರ್ಯದರ್ಶಿಯ ಪರವಾದ ಗುಂಪು ಕಾರ್ಯದರ್ಶಿ ತಪ್ಪು ಮಾಡಿದ್ದರೆ ತನಿಖೆಯಾಗಲಿ ಅದಕ್ಕಾಗಿ ಸರ್ವಸದಸ್ಯರ ಸಭೆಯನ್ನು ಏಕೆ ಮುಂದೂಡುತ್ತೀರಿ ಸಹಕಾರ ಸಂಘದ ಮೇಲ್ವಿಚಾರಕ ತಿಮ್ಮರಾಜುರವರಿಗೆ ಸಭೆ ಮಾಡಲು ಅನುವು ಮಾಡಿಕೊಡಿ ಇದರಿಂದ ಷೇರುಧಾರರಿಗೆ ನಷ್ಟವಾಗುತ್ತz, ನಮಗೆ ನಡವಳಿ ಪುಸ್ತಕ ನೀಡಿ ಸಹಿ ಹಾಕಿ ಹೋಗುತ್ತೇವೆ ಎಂದರು, ಇದಕ್ಕೆ ಪ್ರತಿಯಾಗಿ ವಿರೋಧ ಗುಂಪು ಸಭೆಯ ನಡೆದಿಲ್ಲ, ಅಯವ್ಯಯ ಸೇರಿದಂತೆ ಇತರ ವಿಷಯಗಳನ್ನು ಮಂಡಿಸಿಲ್ಲ ಹೇಗೆ ಸಹಿ ಮಾಡುತೀರಿ ಎಂದರು, ಈ ಜಗಳ ಗಲಾಡೆ ಗದ್ದಲ ಮದ್ಯಾಹ್ನ ೩-೦೦ ಗಂಟೆಯವರೆಗೆ ನಡೆಯಿತು ಸಭೆಯನ್ನು ಮುಂದೂಡಲಾಯಿತು, ಬೆಳ್ಳಿಗ್ಗೆ ಯಿಂದ ಮದ್ಯಾಹ್ನದ ವರೆಗೆ  ಅಹಿತರ ಘಟನೆ ನಡೆಯದಂತೆ ಜನರನ್ನು ಗುಂಪುಗಳನ್ನು ಸಮಾಧಾನ ಪಡಿಸಲು ಕೊಳಾಲ ಪಿಎಸ್‌ಐ ಅಭಿಷೇಶ್ ಹಾಗೂ ಸಿಬ್ಬಂದಿ ಭಾರಿ ಶ್ರಮವಹಿಸಬೇಕಾಗಿ ಬಂತು.

ಸಭೆಯಲ್ಲಿ ಗ್ರಾಮದ ವೆಂಕಟಪ್ಪ, ಮಂಜುನಾಥ್, ತರುಣ್, ಗಣೇಶ್, ಪ್ರಕಾಶ್ ಸೇರಿದಂತೆ  ಹಲವರು ಹಾಜರಿದ್ದರು. 

’ಮಾವತ್ತೂರು ವಿಎಸ್‌ಎಸ್‌ಎನ್ ನಲ್ಲಿ ಎರಡು ತಿಂಗಳು ಕೆಲಸ ಮಾಡದೆ ಇದ್ದರೂ ಕಾರ್ಯದರ್ಶಿಗೆ ಸಂಬಳ ನೀಡಲಾಗಿದೆ, ಅವನ ಮಗನ್ನನ್ನು ಕಂಪ್ಯೂಟರ್ ಆಪರೇಟರ್‌ನ್ನಾಗಿ ಕೆಲಸಕ್ಕೆ ತೆಗೆದುಕೊಂಡಿದ್ದು ಅಪ್ಪ ಮಕ್ಕಳದೆ ರಾಜ್ಯ ಭಾರವಾಗಿದೆ, ಈ ಸಂಬಂಧ ಸಹಕಾರ ಇಲಾಖೆಯ ಎಆರ್ ಮತ್ತು ಡಿಆರ್ ಗೆ ದೂರು ನೀಡಿದ್ದೇನೆ, ಆದರೆ  ಎಆರ್ ರವರೇ ನನಗೆ ದೂರವಾಣಿಯಲ್ಲಿ ಬೆದರಿಕೆ ಹಾಕುತ್ತಾರೆ.’  - ಧನಂಜಯ ಮಾಜಿ ಅದ್ಯಕ್ಷ

 

ಸಭೆಯಲ್ಲಿ ಹಲವು ಸದಸ್ಯರು ಸಭೆ ನಡೆಸಿ ಎನ್ನುತ್ತಾg, ಹಲವರು ಬೇಡ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಹಾಜರಾತಿ ಪಸ್ತಕಕ್ಕೆ ಸಹಿ ಹಾಕಿಲ್ಲ ಕೆಲಸ ಮಾಡಿದ್ದಾರೆ, ಆ ತಿಂಗಳ ಸಂಬಳ ನೀಡಿಲ್ಲ.    - ತಿಮ್ಮರಾಜು ಮೇಲ್ವಿಚಾರಕ

 

ವಯಕ್ತಿಕ ಕಾರಣದಿಂದ ನನ್ನ ಮೇಲೆ ದೂರುತ್ತಿದ್ದಾರೆ, ೩೫ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ.
- ತಿಮ್ಮಯ್ಯ ಕಾರ್ಯದರ್ಶಿ

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST