Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನೀರು ಸರಬರಾಜು ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ

ತುಮಕೂರು: ನೇರಪಾವತಿ ಮತ್ತು ನೇರ ನೇಮಕಾತಿಗೆ ಆಗ್ರಹಿಸಿ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರು ಪ್ರತಿಭಟನೆ ನಡೆಸುತ್ತಿರುವ ಕಾರಣ ,ತುಮಕೂರು ನಗರ ಸೇರಿದಂತೆ ರಾಜ್ಯದಾದ್ಯಂತ ಕುಡಿಯುವ ನೀರಿನ ಸರಬರಾಜಿನಲ್ಲಿ ಸಾಕಷ್ಟು ವೆತ್ಯಯ ಉಂಟಾಗಿದ್ದು, ಸರಕಾರ ಕೂಡಲೇ ವಾಟರ್‌ಮನ್‌ಗಳ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ರಾಜ್ಯದ ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೀರು ಸರಬರಾಜು ನೌಕರರನ್ನ ಹಾಗೂ ಇತರೆ ಹೊರಗುತ್ತಿಗೆ ನೌಕರರನ್ನ ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಹಾಗೂ ನೇರ ಪಾವತಿ ಮಾಡಲು ಒತ್ತಾಯಿಸಿ,ನೀರು ಸರಬರಾಜು ನೌಕರರು ಕಳೆದ ಸೋಮವಾರದಿಂದ ಮುಷ್ಕರ ಕೈಗೊಂಡಿದ್ದು,ಪ್ರಸ್ತುತ ಇದರಿಂದ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವೆತ್ಯಯ ಆಗಿದೆ. ಹಬ್ಬಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಜನರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಸರಕಾರ ಕೂಡಲೇ ಇವರ ಬೇಡಿಕೆಗಳಿಗೆ ಸ್ಪಂದಿಸಬೇಕೆ0ದು ಕೋರಿದ್ದಾರೆ.

ನೀರು ಸರಬರಾಜು ನೌಕರರ ಬೇಡಿಕೆಗಳಾದ ನೇರ ನೇಮಕಾತಿ ಮತ್ತು ನೇರಪಾವತಿ ಅವರ ಬಹುದಿನಗಳ ಬೇಡಿಕೆಯಾಗಿದೆ.ಪಿಕೆಎಸ್‌ಗಳ ಮಾದರಿಯಲ್ಲಿ ಅವರನ್ನು ನೇರ ನೇಮಕಾತಿ ಮತ್ತು ನೇರ ಪಾವತಿಗೆ ಒಳಪಡಿಸುವುದರಿಂದ ಅವರ ಬಹುದಿನದ ಬೇಡಿಕೆ ಈಡೇರಲಿದೆ.ಹಾಗಾಗಿ ಸರಕಾರ ಕೂಡಲೇ ನೀರು ಸರಬರಾಜು ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆ0ಬುದು ನಮ್ಮ ಮನವಿಯಾಗಿದೆ ಎಂದು ಡಾ.ಎಸ್.ರಫೀಕ್ ಅಹಮದ್ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST