ಟೋಕಿಯೊ: ಉತ್ತರ ಜಪಾನ್‌ನಲ್ಲಿ (Japan Earthquake) ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA) ತಿಳಿಸಿದೆ. ಇದರಿಂದಾಗಿ ಮೂರು ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳ ಎಚ್ಚರಿಕೆ ನೀಡಲಾಗಿದೆ.
ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರ ಭಾಗದಲ್ಲಿ ಸಂಜೆ 4:53 ಕ್ಕೆ ಭೂಕಂಪದ ಕೇಂದ್ರ ಬಿಂದು ದಾಖಲಾಗಿದ್ದು, ಟೋಕಿಯೊವರೆಗಿನ ನೂರಾರು ಕಿಲೋಮೀಟರ್ ದೂರದಲ್ಲಿಯೂ ಎತ್ತರದ ಕಟ್ಟಡಗಳು ಕಂಪಿಸುವಷ್ಟು ತೀವ್ರತೆ ಕಂಡುಬಂದಿದೆ.
ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸುನಾಮಿ ಅಲೆಗಳಿಂದ ಗಂಭೀರ ಹಾನಿ ಸಂಭವಿಸುವ ನಿರೀಕ್ಷೆಯಿದ್ದು, ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಸೂಚಿಸಲಾಗಿದೆ.
ಜಪಾನ್ ವಿಶ್ವದ ಅತ್ಯಂತ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ಪೆಸಿಫಿಕ್ ‘ರಿಂಗ್ ಆಫ್ ಫೈರ್’ ಪ್ರದೇಶದ ಪಶ್ಚಿಮ ಅಂಚಿನಲ್ಲಿ ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಸಂಧಿಯಲ್ಲಿ ಸ್ಥಿತಿಯಲ್ಲಿದೆ. ಹೀಗಾಗಿ ದೇಶದಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತವೆ.
ಸುಮಾರು 12.5 ಕೋಟಿ ಜನಸಂಖ್ಯೆಯ ಈ ದ್ವೀಪ ರಾಷ್ಟ್ರವು ಪ್ರತಿ ವರ್ಷ ಸರಾಸರಿ 1,500ಕ್ಕೂ ಹೆಚ್ಚು ಭೂಕಂಪಗಳನ್ನು ಅನುಭವಿಸುತ್ತದೆ. ಜಾಗತಿಕ ಭೂಕಂಪಗಳ ಸುಮಾರು 18% ಘಟನೆಗಳು ಜಪಾನ್‌ನಲ್ಲೇ ಸಂಭವಿಸುತ್ತವೆ. 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪವು ಭೀಕರ ಸುನಾಮಿಗೆ ಕಾರಣವಾಗಿ ಸುಮಾರು 18,500 ಜನರ ಜೀವಹಾನಿಗೆ ಕಾರಣವಾಗಿತ್ತು.