ತುಮಕೂರು: ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಹಿಂಪಡೆಯುವಲ್ಲಿ ಹೊಸ ನಿಯಮಗಳ ಜಾರಿಗೆ ತಂದಿದ್ದು, ಅದರ ಪ್ರಕಾರ: ಪಿ.ಎಫ್. ಹಣ ಡ್ರಾ ಮಾಡಿಕೊಳ್ಳಲು ೧೨ ತಿಂಗಳು, ಪೆನ್ಷನ್ ಹಣ ಡ್ರಾ ಮಾಡಿಕೊಳ್ಳಲು ೩೬ ತಿಂಗಳು ಕಾಯಬೇಕಾದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಗಾರ್ಮೆಂಟ್ಸ್ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸುತ್ತವೆ. ಇವು ಯಾವುದೇ ರೀತಿಯಲ್ಲೂ ಕಾರ್ಮಿಕರಿಗೆ ಅನುಕೂಲಕರವಾಗಿಲ್ಲ. ದಿನನಿತ್ಯದ ಕೂಲಿ ಕೆಲಸದಲ್ಲಿ ಬದುಕು ಸಾಗಿಸುವ ನಮಗೆ, ದೀರ್ಘಾವಧಿ ಕಾಯುವುದು ಆರ್ಥಿಕವಾಗಿ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ ಎಂದು ಒತ್ತಾಯಿಸಿ ಗಾರ್ಮೆಂಟ್ಸ್ ಕಾರ್ಮಿಕರ ಜಂಟಿ ಹೋರಾಟ ಸಮಿತಿ ಮತ್ತು ಸಿಐಟಿಯು, ಸಂರಕ್ಷಣ ವೇದಿಕೆ ಕಾರ್ಯಕರ್ತ ಬೆಂಬಲದದೊಂದಿಗೆ ಕೆಲಸ ಬಹಿಷ್ಕರಿಸಿ ಬೃಹತ್ ಪತಿಭಟನೆಯನ್ನು ನಡೆಸಿದರು.
ನಗರ ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ಹೋರಾಟ ಸಾವಿರಾರು ಮಹಿಳಾ ಕಾರ್ಮಿಕರು ಮೇರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಮಾವೇಶಗೋಂಡು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು. ತಾವು ಉಳಿಸಿದ ತಮ್ಮದೆ ಗಳಿಕೆ ತಮ್ಮ ಕಷ್ಟಕ್ಕೆ ಪಡೆಯಲು ೧೨ ತಿಂಗಳು ಕಾಯುವುದು ಯಾವ ನ್ಯಾಯ ಎಂದು ಉಗ್ರವಾಗಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಗಾಮೇಂಟ್ಸ್ ಕಾರ್ಮಿಕರಾದ ರಾಧಿಕ, ಅಶಾ, ಎಸ್. ನೇತ್ರವಾತಿ. ಶರ್ಮಿಮ್ ಉನ್ನಿಸಾ ಅವರು ಮಾತಾಡಿ ನಮ್ಮ ಹಣ - ನಮ್ಮ ಕಷ್ಟಕ್ಕೆ ಸಿಗದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಸಂರಕ್ಷಣಾ ವೆದಿಕೆಯ ಯೋಗಿಶ್ ಮಾತನಾಡಿ ಬೆಂಬಲಿಸಿದರು. ಸಿಐಟಯು ಜಿಲ್ಲಾಕಾರ್ಯದರ್ಶಿ ಎನ್. ಕೆ. ಸುಬ್ರಮಣ್ಯ ಅವರು ಮಾತನಾಡಿ ಗಾಮೇಂಟ್ಸ್ ಕಾರ್ಮಿಕರು ನಿತ್ಯ ಬೆಲೆಏರಿಕೆಯಲ್ಲಿ ಬಳಲುತ್ತಿದ್ದಾರೆ. ಕನಿಷ್ಟ ಕೂಲಿಯ ನಿಗಧಿಯಲ್ಲಿ ಗಾಮೇಂಟ್ಸ್ ಕಾರ್ಮಿಕರಿಗೆ ಅನ್ಯಾಯಗಿದೆ. ಕಾರ್ಮಿಕರು ಒಗ್ಗಟಿನಿಂದ ಅನ್ಯಾಯಗಳ ವಿರುದ್ದ ಹೊರಾಟ ಮಾಡಬೇಕೆಂದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಭವಿಷ್ಯ ನಿಧಿ ಕಾಯಿದೆ - ೧೯೫೨ ಇಲ್ಲದಂತೆ ಮಾಡಿ ಸಾಮಾಜಿಕ ಸುರಕ್ಷತಾ ಸಂಹಿತೆಯನ್ನು ಕೇಂದ್ರ ಸರ್ಕಾರ ತಂದಿದೆ. ಈ ಸಂಹಿತೆಯು ಎಲ್ಲಾ ದುಡಿಯು ಜನರಿಗೆ ಸಾಮಾಜಿಕ ಭದ್ರತೆ ನೀಡುವ ಬದಲು ಇದ್ದ ಅಲ್ಪ ಸ್ವಲ್ಪ ಭದ್ರತೆಯನ್ನು ಇಲ್ಲವಾಗಿಸುತ್ತಿದೆ. ಇದರ ಭಾಗವಾಗಿಯೆ ಕಾಮಿಕರ ಭವಿಷ್ಯ ನೀಧಿ ಯಲ್ಲಿ ೨೦೨೬ ಬದಲಾವಣೆಗಳನ್ನು ತರಲಾಗಿದೆ. ಈ ಬದಲಾವಣೆಗಳು ಕಾರ್ಮಿಕ ವಿರೋಧಿಯಾಗಿವೆ ಇದರ ಸಮಗ್ರ ಹಿಂಪಡೆಯುವಂತಹ ಹೋರಾಟಕ್ಕೆ ಗಾರ್ಮೇಂಟ್ಸ್ ಕಾರ್ಮಿಕರು ಕೈ ಜೋಡಿಸಲು ವಿನಂತಿಸಿ, ಗಾಮೇಂಟ್ಸ್ ಕಾರ್ಮಿಕರ ಹೋರಾಟಕ್ಕೆ ಬಂಬಲ ಸೂಚಿಸಿದರು.
ಪ್ರತಿಭಟನಾ ನಿರತರಿಂದ ಮನವಿ ಸ್ವಿಕರಿಸಿದ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ತಿಪ್ಪೆಸ್ವಾಮಿ ಅವರು ಇದು ಕೇಂದ್ರ ಸರ್ಕಾರದ ನೀತಿಯಾಗಿದೆ ತಮ್ಮ ಅಹವಾಲನ್ನು ಕೇಂದ್ರ ಸರ್ಕಾರಕ್ಕೆ ತಕ್ಷಣ ಕಳುಹಿಸುವುದಾಗಿ ತಿಳಿಸಿದರು. ಪಿ.ಎಪ್ ಆಯುಕ್ತರಾದ ಅವರು ಸಹ ಮನವಿ ಸ್ವಿಕರಿಸಿದರು.
ಗಾರ್ಮೇಂಟ್ಸ್ ಹೋರಾಟ ಸಮಿತಿಯ ಜಬಿನಾ, ಉಮಾ, ಕವ್ಯಾ, ಸಿಐಟಿಯು ತಾಲ್ಲೂಕು ಸಂಚಾಲಕ ರಂಗಧಾಮಯ್ಯ, ದಿನಮಣಿ, ಇಂತಿಯಾಜ್ ಮತ್ತಿತರು ಮುಂದಾಳತ್ವ ವಹಿಸಿದ್ದರು.