Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದಲಿತ ಸಂಘಟನೆಗಳಿಂದ ಪ್ರತಿಭಟನೆ-ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಆಗ್ರಹ

ಮಧುಗಿರಿ : ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಭಾನುವಾರ ನಡೆದ ಗಲಾಟೆಯಲ್ಲಿ ಮೃತಪಟ್ಟ ಯುವಕ ಸಿಂಹಾದ್ರಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳು ಸೋಮವಾರ  ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿ ಗಳ ಕಚೇರಿಯವರೆಗೂ ಮೆರವಣಿಗೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಸಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ಖಂಡನೀಯ.  ಇದು  ರಕ್ಷಣಾ ಇಲಾಖೆ ತಪ್ಪೋ ಅಥವಾ ಯುವ ಜನತೆಯ ತಪ್ಪೋ ಅರ್ಥವಾಗುತ್ತಿಲ್ಲ. ಆದರೆ ಇಲ್ಲಿ  ಪೋಲಿಸ್  ವೈಪಲ್ಯ ಎದ್ದು ಕಾಣುತ್ತಿದೆ. ಇಲ್ಲಿ ಕಾಣದ ಕೈಗಳು ಕೊಲೆ ಮಾಡಿವೆ. ಕೊಲೆಗಡುಕರನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಬೇಕು. ಘಟನೆಗೆ ಕಾರಣರಾದವರನ್ನು ಕೂಡಲೇ ಬಂದಿಸಬೇಕು. ಅವರ ವಿರುದ್ದ  ಅಟ್ರಾಸಿಟಿ  ಕೇಸ್ ದಾಖಲಿಸಬೇಕು.  ಮೃತ ಯುವಕನ ತಾಯಿಗೆ  ಸರ್ಕಾರಿ ಉದ್ಯೋಗ ದೊರಕಿಸಿಕೊಡಬೇಕು, ಕುಟುಂಬಕ್ಕೆ ೪ ಎಕರೆ ಜಮೀನು ಮತ್ತು ೫೦ ಲಕ್ಷ ನೆರವು ನೀಡಬೇಕು. ಈ ಮೂಲಕ ಸಿಂಹಾದ್ರಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಮುಂದಿನ ದಿನಗಳಲ್ಲಿ ಇತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಮಧುಗಿರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾಜಿ ಶಾಸಕ ಗಂಗಹನುಮಯ್ಯ, ಜಿ.ಪಂ ಮಾಜಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಮಾತನಾಡಿ  ಘಟನೆಯನ್ನು ಖಂಡಿಸಿ ಮೃತ ಯುವಕನ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಬೇಟಿ ನೀಡಿ ಮಾತನಾಡಿ, ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ  ಘಟನೆ ನಡೆದಿರುವುದು ವಿಷಾದನೀಯ. ಸಿಂಹಾದ್ರಿ, ಮಾರುತೀಶ ಇಬ್ಬರೂ ಸ್ನೇಹಿತರಾಗಿದ್ದು, ಗಣೇಶ ವಿಸರ್ಜನೆ ಸಂದರ್ಭದಲ್ಲಿ  ದುರ್ಘಟನೆ ನಡೆದು  ಸಿಂಹಾದ್ರಿ ಮೃತಪಟ್ಟಿರುವ ಘಟನೆ ನಡೆದಿರುವುದು ದುರಂತ.  ಕ್ಷೇತ್ರದಲ್ಲಿ ಎಲ್ಲರೂ ಒಂದು ಕುಟುಂಬದ ರೀತಿ ಇರಬೇಕು. ದಲಿತರಿಗೆ ಹಿಂದುಳಿದವರಿಗೆ ಶಾಸಕರು ಏನು ಅನುಕೂಲ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು.  ಕಸಾಪುರ ಗ್ರಾಮಕ್ಕೆ ೧೩ ಕೋಟಿ ಸಾಲ ನೀಡಲಾಗಿದೆ. ಜಾತಿ ಪಕ್ಷ  ನೋಡದೇ ಅನುಕೂಲ ಮಾಡಿಕೊಡಲಾಗಿದೆ. ನಾವೆಲ್ಲ ಮನೆ ಮಕ್ಕಳ ರೀತಿ ಇರಬೇಕು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು.  ಘಟನೆ ಯಿಂದಾಗಿ ನನ್ನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಪ್ರಕರಣವನ್ನು  ಗಂಭೀರವಾಗಿ ಪರಿಗಣಿಸಲಾಗಿದ್ದು,   ಶಾಸಕರೊಂದಿಗೆ ಚರ್ಚಿಸಿ ಕುಂಟುಂಬದವರಿಗೆ ಕೆಲಸ ದೊರಕಿಸಿ ಕೊಡಲಾಗುವುದು. ಸರ್ಕಾರದ ವತಿಯಿಂದ ಗರಿಷ್ಠ ಪರಿಹಾರ ದೊರಕಿಸಿಕೊಡಲಾಗುವುದು. ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ದ  ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ   ಹೈಕೋರ್ಟ್ ವಕೀಲ ಹರಿ ರಾಮ್,  ಮಾದರ ಮಹಾಸಭಾಧ್ಯಕ್ಷ ಗೋಪಾಲಯ್ಯ, ದಲಿತ ಮುಖಂಡರಾದ ಜೆಸಿಪಿ ವೆಂಕಟೇಶ್,   ದೊಡ್ಡೇರಿ ಕಣಿಮಯ್ಯ,   ತೊಂಡೋಟಿ  ರಾಮಾಂಜಿನಪ್ಪ,  ಎಂ ವೈ ಶಿವಕುಮಾರ್,  ಸತ್ಯ,  ದೊಡ್ಡಹಳ್ಳಿ ನರಸಿಂಹಮೂರ್ತಿ, ಡಿ.ಟಿ.  ಸಂಜೀವ್ ಮೂರ್ತಿ, ಎಸ್.  ಸಂಜೀವಯ್ಯ, ತಿಪ್ಪಾಪುರ  ಗಂಗಾಧರ್, ದಾಸರಹಳ್ಳಿ  ಮಂಜುನಾಥ್, ವಿಜಯ್,  ಡಿ ಟಿ ರಮೇಶ್,  ಕೆ ಶಿವಣ್ಣ, ಸಿದ್ದಾಪುರ  ರಂಗಶಾಮಯ್ಯ   ಬೇಡತ್ತೂರು  ತಿಪ್ಪೇಸ್ವಾಮಿ ಇತರರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST