ತುಮಕೂರು: ಜಮಾಆತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದವತಿಯಿಂದ ಸೀರತ್ ಅಭಿಯಾನದ ಅಂಗವಾಗಿ ಸೆಪ್ಟಂಬರ್ 26ರ ಶನಿವಾರ ಸಂಜೆ 7 ಗಂಟೆಗೆ ನಗರ ಎಂ.ಜಿ.ರಸ್ತೆಯಲ್ಲಿರುವ ವಿಲಾಸಿ ಡಿಲೈಟ್ ಹೋಟೆಲ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ವಿಶೇಷ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಆತೆ ಇಸ್ಲಾಮೀ ಹಿಂದ್‌ನ ಸ್ಥಾನಿಯ ಅಧ್ಯಕ್ಷರಾದ ಅಸ್ರಾರ್ ಅಹಮದ್ ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿಂದು ವಿಶೇಷ ಮಹಿಳಾ ಸೀರತ್ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೀರತ್ ಅಭಿಯಾನ ಮಹಿಳೆಯರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಈ ವಿಶೇಷ ಪ್ರಚವನವನ್ನು ಹಮ್ಮಿಕೊಳ್ಳಲಾಗಿದೆ.ಕ್ರಾಂತಿಯ ಜ್ಯೋತಿ-ಪ್ರವಾದಿ ಮುಹಮ್ಮದ್ (ಸ) ವಿಷಯದ ಮೇಲೆ ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕರಾದ ಶ್ರೀಮತಿ ಕುಲ್ಸೂಮ್ ಅಬೂಬಕ್ಕರ್ ಅವರು ಪ್ರವಚನ ನೀಡಲಿದ್ದಾರೆ.ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತ ಪ್ರವೇಶವಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸೀರತ್ ಪ್ರವಚನ ಕಾಂiÀiðಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪ್ರವಾದಿ ಮುಹಮ್ಮದ್(ಸ) ಅವರು ಹುಟ್ಟಿದ ಮಾಸದ ಪ್ರಯುಕ್ತ ಜಮಾಆತೆ ಇಸ್ಲಾಮಿ ಹಿಂದ್ ಸೀರತ್ ಅಭಿಯಾನವನ್ನು ಆಯೋಜಿಸಿಕೊಂಡು ಬರುತ್ತಿದೆ.2026ರ ಆಗಸ್ಟ್ 26 ರಿಂದ ಸೆಪ್ಟಂಬರ್ 06ವರೆಗೆ ನಡೆದ ಸೀರತ್ ಅಭಿಯಾನದ ಭಾಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಆನಾಥಾಲಯದ ಮಕ್ಕಳಿಗೆ ಸಿಹಿ ಹಂಚುವುದು.ಶಾಲಾ, ಕಾಲೇಜುಗಳ ಮಕ್ಕಳಿಗೆ ರಕ್ತದ ಗುಂಪು ಪರೀಕ್ಷೆ ಇನ್ನಿತರ,ಸಾರ್ವಜನಿಕರಿಗೆ ಸೀರತ್ ಪ್ರವಚನ ಹೀಗೆ ಹಲವು ಕಾರ್ಯಕ್ರಮಗಳು ಈಗಾಗಲೇ ಜರುಗಿದ್ದು, ನವೆಂಬರ್ ತಿಂಗಳಲ್ಲಿ ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಮತ್ತು ಎಲ್ಲಾ ಹಂತದ ಶಿಕ್ಷಕರುಗಳಿಗೆ ಸೇರಿ ಎರಡು ಹಂತದ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು,ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಲು 2026ರ ಅಕ್ಟೋಬರ್ 31 ಕೊನೆಯ ದಿನವಾಗಿದೆ ಎಂದು ಅಸ್ರಾರ್ ಅಹಮದ್ ನುಡಿದರು.
ಸೀರತ್ ಅಭಿಯಾನದ ಭಾಗವಾದ ಪ್ರವಾದಿ ಮುಹಮ್ಮದ್‌ರ(ಸ) “ಜೀವನ ಮತ್ತು ಸಂದೇಶ” ಎಂಬ ವಿಷಯದ ಮೇಲೆ ನಡೆಯುವ ವಿಭಿನ್ನ ವಿಷಯಗಳಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಮುಸ್ಲಿಂಯೇತರ ಶಿಕ್ಷಕರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನವಾಗಿ 20 ಮತ್ತು ತೃತೀಯ ಬಹುಮಾನವಾಗಿ 15 ಸಾವಿರ ರೂ ನೀಡಲಾಗುತ್ತಿದೆ.ಮುಸ್ಲಿಂ ಸಮುದಾಯದವರಿಗೆ 20-15-10 ಸಾವಿರ ರೂಗಳನ್ನು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನೀಡಲಾಗುವುದು. ಹಾಗೆಯೇ ವಿದ್ಯಾರ್ಥಿಗಳಲ್ಲಿ ಮುಸ್ಲಿಂ ಸಮುದಾಯೇತರ ವಿದ್ಯಾರ್ಥಿಗಳಿಗೆ ಪ್ರಥಮ 10 ಸಾವಿರ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ನೀಡಲಾಗುತ್ತಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ 6-4-2 ಸಾವಿರ ನೀಡಲಾಗುತ್ತಿದೆ.ಜಮಾಆತೆ ಇಸ್ಲಾಮೀ ಹಿಂದ್‌ನ ಗೂಗಲ್ ಫಾರಂ ಮೂಲಕ ಹೆಸರು ನೊಂದಾಯಿಸ ಬಹುದಾಗಿದೆ ಎಂದು ವಿವರ ನೀಡಿದರು.
ಸಾಹಿತಿಗಳು, ಹೋರಾಟಗಾರರು,ವಿಶ್ರಾಂತ ನೌಕರರ ಸಂಘದ ಅಧ್ಯಕ್ಷರು ಆದ ಬಾ.ಹ.ರಮಾಕುಮಾರಿ ಮಾತನಾಡಿ,ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ವಿಶೇಷ ಸೀರತ್ ಅಭಿಯಾನ ಆರಂಭಿಸಿರುವುದು ಸಂತೋಷದ ವಿಚಾರ.ಇದರಿಂದ ಸೀರತ್ ಅಭಿಯಾನ ಎಲ್ಲರನ್ನು ಒಳಗೊಂಡAತೆ ಆಗುತ್ತದೆ.ಅಲ್ಲದೆ ನಮ್ಮ ನಡುವೆ ಇರುವ ಅನುಮಾನದ ಗೋಡೆಗಳನ್ನು ಒಡೆದು ಹಾಕಲು ಸಹಕಾರಿಯಾಗಲಿದೆ.ಯಾವ ಧರ್ಮವೂ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳ ಸಾರ ಮಾನವೀಯತೆಯೇ ಆಗಿದೆ. ಇದರ ಬಗ್ಗೆ ಇತರರಿಗೆ ತಿಳಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ, ಮುಸ್ಲೀಂಯೇತರ ಸಮುದಾಯದ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮಗಳ ನಡುವಿನ ಮಾನಸಿಕ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಆ ಮೂಲಕ ಮಹಿಳೆಯರು ಸಂವಿಧಾನ ಬದ್ದ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕರಿಸಬೇಕಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಮಾಆತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಸ್ಥಾನಿಕ ಪ್ರಮುಖರಾದ ಹಾಜಿರಾ ಬೀ, ಸಭೀನಾ ಭಾನು, ಆಸ್ಮಾ ಫೀರ್‌ದೋಸ್, ಶಮಿನಾ ಭಾನು, ಮಲ್ಲಿಕಾ ಉಲ್ಲಪತ್,ಜೀಯಾವುಲ್ಲಾ ಉಪಸ್ಥಿತರಿದ್ದರು.