Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಸಾಪ ಆಶಯ ಸ್ಥಾಪನೆಗೆ ಜಾಣಗೆರೆ ವೆಂಕಟರಾಮಯ್ಯರನ್ನು ಬೆಂಬಲಿಸಿ

ತುಮಕೂರು: ಕನ್ನಡ ಸಾಂಸ್ಥಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವನ್ನು ಅಧಿಕಾರವಾಗಿ ಸ್ವೀಕರಿಸುವ ಅಧಿಕಾರಿ ಬೇಡ, ಸೇವೆಯಾಗಿ ಸ್ವೀಕರಿಸುವ ಲೇಖಕ, ಕನ್ನಡಪರ ಹೋರಾಟಗಾರ, ಪ್ರಮಾಣಿಕ ವ್ಯಕ್ತಿ ಬೇಕು. ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ, ಪತ್ರಕರ್ತ, ಹೋರಾಟಗಾರ, ನೈತಿಕ  ಶುದ್ಧತೆ, ಪಾರದರ್ಶಕ ನಡೆಯ ಜಾಣಗೆರೆ ವೆಂಕಟರಾಮಯ್ಯನವರು ಸೂಕ್ತವಾದ ವ್ಯಕ್ತಿ. ಕನ್ನಡಿಗರವರು ಇವರನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆ ಆಕಾಂಕ್ಷಿಯಾಗಿರುವ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಿ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ, ಕನ್ನಡಿಗರು, ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆಯ ಅವಲೋಕನ ಮಾಡಿದಾಗ ಕಳೆದ ಹತ್ತು ವರ್ಷಗಳಿಂದ ಪರಿಷತ್ತಿನ ಮೂಲ ಉದ್ದೇಶ ವಿಫಲವಾಗಿದೆ. ಅದರ ಪುನರ್ ಸ್ಥಾಪನೆ ಆಗಬೇಕಾಗಿದೆ ಎಂದರು.

ಕನ್ನಡ, ಕನ್ನಡ ನಾಡಿನ ಅಸ್ಮಿತೆ ಕಾಪಾಡುವ ಆಶಯದಿಂದ ೧೧೨ ವರ್ಷಗಳ ಹಿಂದೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಆದರೆ ಅವರು ಯಾವತ್ತೂ ಪರಿಷತ್ ಅನ್ನು ಅರಮನೆಯ ವೇದಿಕೆಯನ್ನಾಗಿ ಮಾಡಿಕೊಳ್ಳಲಿಲ್ಲ. ಅನೇಕ ಹಿರಿಯರು ಪರಿಷತ್ ಅಧ್ಯಕ್ಷರಾಗಿ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಸಂಸ್ಥೆಯನ್ನು ಘನತೆಯಿಂದ ಕಟ್ಟಿಬೆಳೆಸಿದರು. ಆದರೆ ಈ ಹಿಂದಿನ ಅಧ್ಯಕ್ಷ ಮಹೇಶ್ ಜೋಷಿ ಅವರು ರಾಜಕೀಯ ಪಕ್ಷವೊಂದರ ಬೆಂಬಲದಿಂದ ಸರ್ವಾಧಿಕಾರಿ ಧೋರಣೆಯಿಂದ ಪರಿಷತ್ತಿನ ಸ್ವಾಯತತ್ತೆಗೆ ಧಕ್ಕೆ ತಂದರು, ಅಸಾಂಸ್ಕೃತಿಕ ವಾತಾವರಣಕ್ಕೆ ದೂಡಿದರು. ಇಂತಹ ಸ್ಥಿತಿಯಲ್ಲಿ ಸಮಾನ ಮನಸ್ಕರೆಲ್ಲಾ ಸೇರಿ ಕನ್ನಡ ಸಾಹಿತ್ಯ ಪರಿಷತ್ ಉಳಿಸಲು ಸಂಕಲ್ಪದ ರೀತಿಯಲ್ಲಿ ಹೋರಾಟ ನಡೆಸಬೇಕಾಯಿತು. ಹೋರಾಟದ ಫಲವಾಗಿ ಮಹೇಶ್ ಜೋಷಿ ಅಧ್ಯಕ್ಷ ಸ್ಥಾನದಿಂದ ಅಮಾನತ್ತಾದರು ಎಂದರು.

ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಶುದ್ಧೀಕರಣ ಆಗಬೇಕಾಗಿದೆ. ಪರಿಷತ್ ಘನತೆ ಕಾಪಾಡುವ ಆಶಯದ ಸಮಾನಮನಸ್ಕರು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಇದೇ ಸಂಕಲ್ಪದಲ್ಲಿ ಪ್ರಣಾಳಿಕೆ ಸಿದ್ಧಪಡಿಸಿ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿ, ಸಭೆ ನಡೆಸಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿದರು.

ಹಿರಿಯ ಸಾಹಿತಿಗಳಾದ ಪ್ರೊ. ಜಯಪ್ರಕಾಶಗೌಡ, ಡಾ. ಬಂಜಗೆರೆ ಜಯಪ್ರಕಾಶ್, ಬಾ.ಹ. ರಮಾಕುಮಾರಿ, ಎಂ.ಹೆಚ್. ನಾಗರಾಜು, ಹೋರಾಟಗಾರ ವೈ.ಕೆ. ಬಾಲಕೃಷ್ಣ ಮೊದಲಾದವರು ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಿ ಮಾತನಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST