ಮಧುಗಿರಿ: ಬುಡುಬುಡಿಕೆ ವೇಷದಲ್ಲಿ ಬಂದು ಬಂಗಾರ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮದುಗಿರಿ ಪೊಲೀಸರು ಬಂದಿಸಿದ್ದಾರೆ.
ತಿಪಟೂರು ತಾಲೂಕಿನ ನೊಣವಿನಕೆರೆ ಕೋಡಿಹಳ್ಳಿ ಗ್ರಾಮದ ಮಂಜಯ್ಯ ಹಾಗೂ ಕೃಷ್ಣ ಎಂಬುವರನ್ನು ಬಂಧಿಸಿ ಎರಡು ಪ್ರಕರಣಗಳಲ್ಲಿ ೪೦ ಗ್ರಾಂ ಚಿನ್ನದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಕೆಲವರು ಬುಡುಬುಡಿಕೆ ವೇಷದಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ನಿಮ್ಮ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ನಂಬಿಸಿ ನಿಮ್ಮಲ್ಲಿರುವ ಬಂಗಾರವನ್ನು ಪೂಜೆ ಮಾಡಿ ಕೊಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ ಇಂತಹ ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಬ್ ಇನ್ಸ್ಪೆಕ್ಟರ್ ಎಂ ಎಸ್ ಚಂದ್ರಶೇಖರ್ ಕೋರಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ವೆಂಕಟೇಶ್ ವೇದಗಳಾದ ಮೋಹನ್ ರಂಗರಾಜು ಪ್ರತಾಪ್ ವಿಜಯ್ ರಜಿತ್ ಭಾಗವಹಿಸಿದ್ದರು