Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಮದುವೆಯಾದ ಕೆಲವೇ ದಿನಗಳಲ್ಲಿ ದುರಂತ: ಹೆಲಿಕಾಪ್ಟರ್‌ ಪತನದಲ್ಲಿ ಭಾರತೀಯ ಮೂಲದ ಪೈಲಟ್‌ ಸಾವು

ವಾಷಿಂಗ್ಟನ್: ಹೊಸ ಬದುಕಿನ ಕನಸು ಕಣ್ತುಂಬಿಕೊಂಡಿದ್ದ ನವದಂಪತಿಯ ಜೀವನದಲ್ಲಿ ವಿಧಿಯಾಟ ಕಹಿ ನೆನಪು ಮೂಡಿಸಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಹನಿಮೂನ್‌ಗೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಪತನಗೊಂಡು ಭಾರತೀಯ ಮೂಲದ ಪೈಲಟ್‌ (Indian-Origin Pilot) ಮೃತಪಟ್ಟಿರುವ ಘಟನೆ ಅಮೆರಿಕದ (America) ಜಾರ್ಜಿಯಾದಲ್ಲಿ (Georgia) ನಡೆದಿದೆ.

ಡೆಲ್ಟಾ ಏರ್‌ಲೈನ್ಸ್‌ (Delta Air Lines) ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದ 26 ವರ್ಷದ ಡೇವ್ ಫಿಜಿ ಈ ದುರಂತದಲ್ಲಿ ಸಾವನ್ನಪ್ಪಿದವರು. ಕೇರಳ ಮೂಲದವರಾಗಿದ್ದ ಡೇವ್, ವಿವಾಹ ಸಮಾರಂಭದ ಬಳಿಕ ಪತ್ನಿಯೊಂದಿಗೆ ಹನಿಮೂನ್‌ಗೆ ತೆರಳುತ್ತಿದ್ದ ವೇಳೆ ಪ್ರಯಾಣಿಸುತ್ತಿದ್ದ Robinson R66 ಹೆಲಿಕಾಪ್ಟರ್ ಡಾಸನ್‌ವಿಲ್ಲೆಯ ಮದುವೆ ಮಂಟಪದ ಸಮೀಪವೇ ಪತನಗೊಂಡಿದೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಕೂಡ ಮೃತಪಟ್ಟಿದ್ದು, ಅವರ ಗುರುತು ಇನ್ನೂ ಬಹಿರಂಗವಾಗಿಲ್ಲ. ಡೇವ್ ಪತ್ನಿ ಜೆಸ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅಟ್ಲಾಂಟಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ಮಾತನಾಡಿದ ಡೇವ್ ತಂದೆ ಜಾರ್ಜ್ ಫಿಜಿ, “ನನ್ನ ಮಗ ಅಷ್ಟು ಖುಷಿಯಾಗಿದ್ದ ಕ್ಷಣವನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಕೆಲವೇ ಗಂಟೆಗಳಲ್ಲಿ ಅವನ ಜೀವನ ಅಂತ್ಯವಾಗುತ್ತದೆ ಎಂದು ಊಹಿಸಲಿಲ್ಲ” ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಚರ್ಚ್‌ನಲ್ಲಿ ಪರಿಚಯವಾಗಿದ್ದ ಜೆಸ್ನಿಯನ್ನು ಡೇವ್ ಮೇ 29ರಂದು ವಿವಾಹವಾಗಿದ್ದರು. ಡಾಸನ್‌ವಿಲ್ಲೆಯ ರೆಸಾರ್ಟ್‌ನಲ್ಲಿ ನಡೆದ ಅದ್ಧೂರಿ ಮದುವೆಗೆ 400ಕ್ಕೂ ಹೆಚ್ಚು ಅತಿಥಿಗಳು ಸಾಕ್ಷಿಯಾಗಿದ್ದರು. ಆರತಕ್ಷತೆ ಬಳಿಕ ದಂಪತಿಯನ್ನು ಜಾರ್ಜಿಯಾದ ಡೆಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು Robinson R66 ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಅಟ್ಲಾಂಟಾದ ಹೋಟೆಲ್‌ಗೆ ತೆರಳುವ ಯೋಜನೆ ಇತ್ತು. ಆದರೆ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಮದುವೆ ಮಂಟಪದ ಸಮೀಪದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಶವದ ಪಕ್ಕದಲ್ಲೇ 6 ಗಂಟೆ ಕಳೆದ ನವವಿವಾಹಿತೆ:
ಅಪಘಾತ ನಡೆದ ಪ್ರದೇಶ ದಟ್ಟ ಅರಣ್ಯವಾಗಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಹೆಲಿಕಾಪ್ಟರ್ ಪತ್ತೆ ಹಚ್ಚಲು ಸಾಕಷ್ಟು ಸಮಯ ಹಿಡಿಯಿತು. ಪರಿಣಾಮವಾಗಿ ಗಾಯಗೊಂಡಿದ್ದ ಜೆಸ್ನಿ ಸುಮಾರು ಆರು ಗಂಟೆಗಳ ಕಾಲ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರು. ಪ್ರಜ್ಞೆ ಬಂದಾಗ ಪತಿ ಡೇವ್ ತಮ್ಮ ಮಡಿಲಲ್ಲೇ ಮಲಗಿದ್ದನ್ನು ಕಂಡಿದ್ದಾರೆ. ದೇಹ ಸಂಪೂರ್ಣ ರಕ್ತಸಿಕ್ತವಾಗಿ ತಣ್ಣಗಾಗಿದ್ದರಿಂದ, ನರ್ಸ್ ಆಗಿದ್ದ ಜೆಸ್ನಿಗೆ ಪತಿ ಮೃತಪಟ್ಟಿರುವುದು ತಕ್ಷಣವೇ ಅರಿವಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹವಾಮಾನದ ಬಗ್ಗೆ ಮುಂಚೆಯೇ ಕಳವಳ ವ್ಯಕ್ತಪಡಿಸಿದ್ದ ಡೇವ್:
ಪೈಲಟ್ ಆಗಿದ್ದ ಡೇವ್, ಹಾರಾಟಕ್ಕೂ ಮೊದಲು ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. “ದಟ್ಟ ಮಂಜಿನಿಂದ ಏನೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ನಾವು ಹಾರಾಟ ನಡೆಸುವುದಿಲ್ಲ” ಎಂದು ಅವರು ಹೆಲಿಕಾಪ್ಟರ್ ಪೈಲಟ್‌ಗೆ ಹೇಳಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ. ಆದರೆ, “ಹೆಚ್ಚು ಎತ್ತರದಲ್ಲಿ ಹಾರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದು ಪೈಲಟ್ ಭರವಸೆ ನೀಡಿದ್ದರೆಂದು ಹೇಳಲಾಗಿದೆ.

ಸದ್ಯ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಘಟನೆ ಕುರಿತು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ