ಟೆಹ್ರಾನ್: ಹಾರ್ಮುಜ್ ಜಲಸಂಧಿಯಿಂದ ಹೊರಹೋಗಲು ಮುಂದಾದ ಎರಡು ತೈಲ ಟ್ಯಾಂಕರ್‌ಗಳನ್ನು ಯುಎಸ್ ನೌಕಾಪಡೆ ತಡೆದು, ತಕ್ಷಣ ಹಿಂದಿರುಗುವಂತೆ ಸೂಚಿಸಿದೆ. ಹಡಗುಗಳು ಒಮಾನ್ ಕೊಲ್ಲಿಯ ಚಾಬಹಾರ್ ಬಂದರಿನಿಂದ ಹೊರಟಿದ್ದು, ಯುದ್ಧನೌಕೆ ರೇಡಿಯೋ ಮೂಲಕ ಸಂಪರ್ಕಿಸಿ ವಾಪಸ್ ಹೋಗಲು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಅಮೆರಿಕಾ ದಿಗ್ಬಂಧನ ನಡುವೆಯೇ ಹಾರ್ಮುಜ್ ದಾಟಿದ ಇರಾನ್ ಹಡಗುಗಳು
ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆ, ಅದನ್ನು ಮುಕ್ತಗೊಳಿಸಲು ಅಮೆರಿಕಾ ನೌಕಾಪಡೆ ದಿಗ್ಬಂಧನ ಕ್ರಮ ಕೈಗೊಂಡಿದೆ.
ಫೆಬ್ರವರಿ 28 ರಂದು ಭುಗಿಲೆದ್ದ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ತಣಿಸಲು ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆ ವಿಫಲವಾದ ಬಳಿಕ, ಟ್ರಂಪ್ ದಿಗ್ಬಂಧನ ಜಾರಿಗೆ ತಂದಿದ್ದಾರೆ. ಸೋಮವಾರದಿಂದ ಈ ಕ್ರಮ ಜಾರಿಯಾದ ಬಳಿಕ ಯಾವುದೇ ಹಡಗುಗಳ ಸಂಚಾರ ಇಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಹಾರ್ಮುಜ್‌ಗೆ ಪ್ರವೇಶಿಸಿದರೆ ಕಠಿಣ ಕ್ರಮ – ಟ್ರಂಪ್ ಎಚ್ಚರಿಕೆ
ಆದರೂ, ಅಮೆರಿಕಾ ದಿಗ್ಬಂಧನವನ್ನು ಲೆಕ್ಕಿಸದೆ ಇರಾನ್ ಬಂದರುಗಳಿಂದ ಹೊರಟ ಕೆಲವು ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದವು ಎಂದು ಕಡಲ ಟ್ರ್ಯಾಕಿಂಗ್ ಮಾಹಿತಿ ತಿಳಿಸಿದೆ.
ಲೈಬೀರಿಯಾ ಧ್ವಜದ ‘ಕ್ರಿಸ್ಟಿಯಾನ್ನಾ’, ಕೊಮೊರೊಸ್ ಧ್ವಜದ ‘ಎಲ್ಪಿಸ್’ ಹಾಗೂ ‘ಅರ್ಗೋ ಮಾರಿಸ್’ ನೌಕೆಗಳು ಸರಕು ಸಾಗಣೆ ಬಳಿಕ ಈ ಪ್ರಮುಖ ಜಲಮಾರ್ಗವನ್ನು ಯಶಸ್ವಿಯಾಗಿ ದಾಟಿವೆ ಎಂದು ವರದಿಯಾಗಿದೆ.