UPI ಅನ್ನು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಅತ್ಯಂತ ಜನಪ್ರಿಯವಾಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ನಡೆಯುವ ಕೆಲವು ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಭಾರತ ಸರ್ಕಾರದ ನಿರ್ಧಾರವು, ಸಣ್ಣ ಸಣ್ಣ ವ್ಯವಹಾರಗಳ ಮೇಲೆ ಅದರ ಪರಿಣಾಮದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ ೨,೦೦೦ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಕೆಲವು UPI ಪಾವತಿಗಳ ಮೇಲೆ, ಅಕ್ಟೋಬರ್ ೧೫ ರಿಂದ ಶೇಕಡಾ ೦.೪ ರಷ್ಟು ಶುಲ್ಕ ಅನ್ವಯವಾಗಲಿದೆ ಎಂದು ’ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ ಮಂಗಳವಾರ ತಿಳಿಸಿದೆ.
ಈ ಹೆಚ್ಚುವರಿ ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕಾಗುತ್ತದೆ ಮತ್ತು ಈ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸಲು ಅವರಿಗೆ ಅವಕಾಶವಿರುವುದಿಲ್ಲ ಎಂದು ಅದು ಹೇಳಿದೆ.
ಈ ಹೊಸ ಶುಲ್ಕವು ದೀರ್ಘಾವಧಿಯಲ್ಲಿ UPI ವ್ಯವಸ್ಥೆಯನ್ನು ಸಮರ್ಥನೀಯವಾಗಿ ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳುತ್ತದೆ; ಆದರೆ, ಇದು ವ್ಯಾಪಾರಿಗಳ ವೆಚ್ಚವನ್ನು ಹೆಚ್ಚಿಸಬಹುದು ಮತ್ತು ಯುಪಿಐ ವ್ಯವಸ್ಥೆಯನ್ನು ಬಳಸದಂತೆ ಗ್ರಾಹಕರನ್ನು ನಿರುತ್ಸಾಹಗೊಳಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
೨೦೧೬ ರಲ್ಲಿ ಪ್ರಾರಂಭವಾದ UPI, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತಕ್ಷಣವೇ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಜನರಿಗೆ ಸರಳವಾದ ಅನುಕೂಲವನ್ನು ಮಾಡಿಕೊಟ್ಟಿದೆ. ಇದರ ಸರಳ ಬಳಕೆಯ ವ್ಯವಸ್ಥೆ ಇದನ್ನು ಭಾರತದಲ್ಲಿ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿದೆ; ಸಣ್ಣ ಮಾರಾಟಗಾರರಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಎಲ್ಲರೂ ಇದನ್ನು ಬಳಸುತ್ತಿದ್ದಾರೆ.
ಇಲ್ಲಿಯವರೆಗೆ, UPI ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ವೆಚ್ಚವನ್ನು ಹೆಚ್ಚಾಗಿ ಸರ್ಕಾರ, ಬ್ಯಾಂಕುಗಳು ಮತ್ತು ಪಾವತಿ ಕಂಪನಿಗಳೇ ಭರಿಸಿವೆ. ’ಮರ್ಚೆಂಟ್ ಡಿಸ್ಕೌಂಟ್ ರೇಟ್’ ಎಂಬ ಈ ಹೊಸ ಹೆಚ್ಚುವರಿ ಶುಲ್ಕವು, ಆ ವೆಚ್ಚಗಳ ಪೈಕಿ ಕೆಲವನ್ನು ಭರಿಸಲು ಸಹಕಾರಿಯಾಗಿದೆ ಎಂದು ಅಂದಾಜಿಸಲಾಗಿದೆ.
ಒಆಖ ಎಂಬ ಶುಲ್ಕ UPI ವ್ಯವಸ್ಥೆಯನ್ನು ನಿರ್ವಹಿಸುವ ಎನ್ ಪಿ ಸಿ ಐ ಸಂಗ್ರಹಿಸುವ ಯಾವುದೇ ತೆರಿಗೆ ಅಥವಾ ಹೆಚ್ಚುವರಿ ಶುಲ್ಕವಲ್ಲ ಎಂದು ಸರ್ಕಾರ ತಿಳಿಸಿದೆ.