Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶರಣರ ಆದರ್ಶ ತತ್ವಗಳು ಕೊನೆಗೊಳ್ಳದೇ ಮುಂದುವರೆಯಲಿ

ಶರಣ ಬೆಳಗು ಗುರುಪೂರ್ಣಿಮೆ ಕಾರ್ಯಕ್ರಮ ಅನುಭಾವ ಮಾಲೆಯಲ್ಲಿ ಕಾಶಿಬಾಯಿ ರಾಂಪೂರ ಆಶಯ

ಹಸಿರು ಕ್ರಾಂತಿ ವರದಿ ಮುದ್ದೇಬಿಹಾಳ

ಶರಣರ ಆದರ್ಶ ತತ್ವಗಳು ನಮ್ಮ ತಲೆಮಾರಿಗೆ ಕೊನೆಗೊಳ್ಳದೇ ಮುಂದುವರೆಯಬೇಕು. ಅದಕ್ಕಾಗಿ ನಾವು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಹೇಳಿದರು.


ಪಟ್ಟಣದ ಮಾರುತಿ ನಗರದ ಪಂಚಾಕ್ಷರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿಯವರ ಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುದ್ದೇಬಿಹಾಳ, ಕದಳಿ ವೇದಿಕೆ ಹಾಗೂ ಯುವ ಘಟಕ ಮುದ್ದೇಬಿಹಾಳದ ಶರಣ ಬೆಳಗು ಗುರುಪೂರ್ಣಿಮೆ ಕಾರ್ಯಕ್ರಮ ಅನುಭಾವ ಮಾಲೆ-53ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಯುವ ಜನಾಂಗಕ್ಕೆ ತಿಳಿಸಿಕೊಡುವ ಉದ್ದೇಶವನ್ನಿಟ್ಟುಕೊಂಡು ಬೇರೆ, ಬೇರ ಸ್ಥಳಗಳಲ್ಲಿ ವಿಶಿಷ್ಟವಾಗಿ, ವಿಭಿನ್ನವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. 12ನೇ ಶತಮಾನದ ಶರಣರಿಗೆ ನೀಡುವ ಗೌರವ ಸೇವೆವೆಂದು ಭಾವಿಸುತ್ತೇವೆ ಎಂದು ವಿವರಿಸಿದರು.


ಶಿಕ್ಷಕಿ ಸರೋಜಾ ಬ.ಕೋರಿ ಶರಣರ ದೃಷ್ಟಿಯಲ್ಲಿ ಗುರು ವಿಷಯ ಕುರಿತು ಮಾತನಾಡಿ, ಶರಣರ ದೃಷ್ಟಿಯಲ್ಲಿ ಗುರು ಕೇವಲ ವ್ಯಕ್ತಿಯಲ್ಲ, ಅದೊಂದು ಜ್ಞಾನಾಮೃತ ನೀಡುವ ದಿವ್ಯಶಕ್ತಿ. ಗುರು-ಶಿಷ್ಯರ ಸಂಬಂಧವು ಪ್ರೀತಿ, ಗೌರವದ ಮೇಲೆ ನಿಂತಿದೆ. ಗುರುವು ಶಿಷ್ಯನ ತಪ್ಪುಗಳನ್ನು ತಿದ್ದಿ ಸನ್ಮಾರ್ಗ ತೋರಿದರೇ, ಶಿಷ್ಯನು ಗುರುವಿನ ನುಡಿಯನ್ನು ಶ್ರದ್ಧೆಯಿಂದ ಪಾಲಿಸಿ ಯಶಸ್ವಿನ ಶಿಖರ ಏರಬೇಕು ಎಂದು ಸಲಹೆ ನೀಡಿದರು.


ಜೀವದ ಅಜ್ಞಾನ ಹೊಡೆದು ಅರಿವು ಮೂಡಿಸುವ ಪರಮ ತತ್ವವೇ ಗುರು. ಹೀಗಾಗಿ ಗುರುವು ಭಕ್ತನಿಗೆ ಸನ್ಮಾರ್ಗ ತೋರಿಸಿ, ಶಿವನ ಸ್ವರೂಪದ ಪರಿಚಯ ಮಾಡಿಕೊಡುತ್ತಾನೆ. ಶರಣರ ಧರ್ಮದಲ್ಲಿ ಗುರು, ಲಿಂಗ ಮತ್ತು ಜಂಗಮ ಬೇರೆ ಬೇರೆಯಲ್ಲ, ಅವು ಒಂದೇ ದೈವಿಕ ಶಕ್ತಿಯ ರೂಪಗಳು ಎಂದು ವಿವರಿಸಿದರು.


ನಿವೃತ್ತ ಮುಖ್ಯೋಪಾಧ್ಯಪಕಿ ಟಿ.ವೈ.ಕಟ್ಟಿಮನಿ, ನಿವೃತ್ತ ಮುಖ್ಯೋಪಾಧ್ಯಪಕಿ ಎಸ್‌.ಬಿ.ನಿಡಗುಂದಿ, ನಿವೃತ್ತ ಮುಖ್ಯೋಪಾಧ್ಯಪಕಿ ಪಿ.ಕೆ.ದೊಡಮನಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.


ಮುಖ್ಯ ಅತಿಥಿ ಉಪತಹಸೀಲ್ದಾರ್‌ ಎಚ್‌.ಎಂ.ಶಿವಣಗಿ ಮಾತನಾಡಿದರು. ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ ಸ್ವಾಗತಿಸಿದರು. ಬಸವ ಮಹಾಮನೆ ಬಳಗ, ಕದಳಿ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.


ಕಾಶಿಬಾಯಿ ರಾಂಪೂರವರ ಮುಂದಾಳತ್ವದಲ್ಲಿ ಕದಳಿ ವೇದಿಕೆ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ತಿಳಿಸುವಂತ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣರ ತತ್ವಗಳನ್ನು ತಿಳಿಸುವಂತಾಗಲಿ. ಜನರಿಗೆ ಶರಣ ಸಾಹಿತ್ಯ ಜ್ಞಾನಾಮೃತ ಲಭಿಸುವಂತಾಗಲಿ.

-ಮಹಾದೇವ ಶಾಸ್ತ್ರಿ, ಪ್ರವಚನಕಾರರು, ಸೋಮನಾಳ.


ಶರಣರ ಆದರ್ಶ ಜೀವನ ಹಾಗೂ ಮೌಢ್ಯಗಳನ್ನು ಕಳೆಯಲು ಅವರ ಅನುಸರಿಸಿದ ಮಾರ್ಗಗಳು ಪ್ರಸ್ತುತ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಅತ್ಯಂತ ಪ್ರೇರಣದಾಯ ಅನುಭವ ವಾಣಿಗಳು. ಅವುಗಳ ಜಾಗೃತಿ ಹಾಗೂ ಜ್ಞಾನ ಹರಿವು ಹೆಚ್ಚಿಸುವಲ್ಲಿ ಕದಳಿ ವೇದಿಕೆ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸರ್ವ ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಅದರ ಪ್ರಯತ್ನವೇ ಅನುಭಾವ ಮಾಲೆ ಕಾರ್ಯಕ್ರಮ.
-ಕಾಶಿಬಾಯಿ ಶಿವಯೋಗಪ್ಪ ರಾಂಪೂರ, ಕದಳಿ ವೇದಿಕೆ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ