ಚಂಡೀಗಢ: Maharaja Yadavindra Singh Stadiumನಲ್ಲಿ ನಡೆದ IPL 2026 ಪಂದ್ಯದಲ್ಲಿ Lucknow Super Giants ವಿರುದ್ಧ Punjab Kings 54 ರನ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, Priyansh Arya ಹಾಗೂ Cooper Connolly ಸಿಡಿಲಾಟದ ನೆರವಿನಿಂದ ಲಕ್ನೋಗೆ 255 ರನ್‌ಗಳ ಗುರಿ ನೀಡಿತು. ಬೆನ್ನಟ್ಟಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್‌ಗಳಿಗಷ್ಟೇ ಸೀಮಿತವಾಯಿತು.
ಲಕ್ನೋ ಪರ Ayush Badoni 21 ಎಸೆತಗಳಲ್ಲಿ 35 ರನ್ ಗಳಿಸಿ Vijaykumar Vyshakಗೆ ವಿಕೆಟ್ ಒಪ್ಪಿಸಿದರು. Mitchell Marsh 28 ಎಸೆತಗಳಲ್ಲಿ 40 ರನ್ ಮಾಡಿ Yuzvendra Chahal ಬೌಲಿಂಗ್‌ನಲ್ಲಿ ಔಟಾದರು. ಈ ವೇಳೆಗೆ ತಂಡದ ಮೊತ್ತ 109 ರನ್ ಆಗಿತ್ತು.
ನಾಯಕ Rishabh Pant 23 ಎಸೆತಗಳಲ್ಲಿ 43 ರನ್‌ಗಳಿಸಿ ಔಟಾದರು. Aiden Markram 42 ರನ್ ಗಳಿಸಿದರೆ, ಮುಕುಲ್ ಚೌಧರಿ 21 ರನ್‌ಗಳೊಂದಿಗೆ ಔಟಾಗದೆ ಉಳಿದರು.
ಅಬ್ಬರದ ಆಟ:
ಪಂಜಾಬ್ ಪರ ಆರಂಭದಲ್ಲೇ Prabhsimran Singh ಸೊನ್ನೆಗೆ ಔಟಾದರೂ, ಎರಡನೇ ವಿಕೆಟ್‌ಗೆ ಪ್ರಿಯಾಂಶ್ ಆರ್ಯ ಹಾಗೂ ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್‌ಗಳ ಜೊತೆಯಾಟವಾಡಿದರು.
12 ಓವರ್‌ಗಳ ಅಂತ್ಯಕ್ಕೆ ಪಂಜಾಬ್ 1 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ರನ್ ಹರಿವನ್ನು ತಡೆಯಲು ಪಂತ್, 13ನೇ ಓವರ್‌ಗೆ ಮಾರ್ಕ್ರಾಮ್‌ಗೆ ಬಾಲ್ ನೀಡಿದರು.
ಮಾರ್ಕ್ರಾಮ್ ಎಸೆದ ಮೊದಲ ಮೂರು ಎಸೆತಗಳನ್ನು ಕೊನೊಲಿ ಸಿಕ್ಸ್‌ಗೆ ಅಟ್ಟಿದರು. ವೈಡ್ ಬಳಿಕ ಸಿಂಗಲ್ ತೆಗೆದು ಸ್ಟ್ರೈಕ್ ಪಡೆದ ಆರ್ಯ ಕೊನೆಯ ಎರಡು ಎಸೆತಗಳನ್ನೂ ಸಿಕ್ಸ್‌ಗೆ ಅಟ್ಟಿದರು. ಈ ಓವರ್‌ನಲ್ಲಿ ಒಟ್ಟು 32 ರನ್‌ಗಳು ಬಂದವು.
ಪ್ರಿಯಾಂಶ್ ಆರ್ಯ 93 ರನ್ (37 ಎಸೆತ, 9 ಸಿಕ್ಸ್), ಕೊನೊಲಿ 87 ರನ್ (46 ಎಸೆತ) ಸಿಡಿಸಿದರು. ಕೊನೆಯಲ್ಲಿ Marcus Stoinis 29 ರನ್, Shashank Singh 17 ರನ್‌ಗಳಿಸಿ ಪಂಜಾಬ್ 7 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.