Indian Premier League 2026: 42ನೇ ಪಂದ್ಯದಲ್ಲಿ Gujarat Titans ಹಾಗೂ Royal Challengers Bangalore ತಂಡಗಳು ಮುಖಾಮುಖಿಯಾಗಲಿವೆ. ಗುರುವಾರ (ಏ.30) ಅಹಮದಾಬಾದ್‌ನ Narendra Modi Stadium ನಲ್ಲಿ ನಡೆಯಲಿರುವ ಈ ಕಾದಾಟಕ್ಕಾಗಿ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಸಿದ್ಧಪಡಿಸಿದೆ. ಕಳೆದ ಪಂದ್ಯದಲ್ಲಿದ್ದಂತೆ 6+2+4 ಸಂಯೋಜನೆಯನ್ನು ಮುಂದುವರಿಸಲು ತಂಡ ತೀರ್ಮಾನಿಸಿದೆ. ಈ ಫಾರ್ಮುಲಾದ ಪ್ರಕಾರ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ ಪ್ರಮುಖ ಬ್ಯಾಟರ್‌ಗಳಾಗಿ ಕಣಕ್ಕಿಳಿಯಲಿದ್ದಾರೆ.
ಇನ್ನೊಂದೆಡೆ ಆಲ್‌ರೌಂಡರ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಮತ್ತು ರೊಮಾರಿಯೊ ಶೆಫರ್ಡ್ ಸ್ಥಾನ ಪಡೆಯಲಿದ್ದಾರೆ. ಬೌಲಿಂಗ್ ದಾಳಿಯಲ್ಲಿ ಜೋಶ್ ಹೇಝಲ್‌ವುಡ್, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ದಾರ್ ಮುಖ್ಯ ಪಾತ್ರವಹಿಸಲಿದ್ದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ ಸುಯಶ್ ಶರ್ಮಾ ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆರು ಬ್ಯಾಟರ್‌ಗಳು, ಇಬ್ಬರು ಆಲ್‌ರೌಂಡರ್‌ಗಳು ಮತ್ತು ನಾಲ್ವರು ಬೌಲರ್‌ಗಳ ಸಮತೋಲನದೊಂದಿಗೆ ಆರ್‌ಸಿಬಿ ತಂಡ ಕಣಕ್ಕಿಳಿಯಲಿದೆ. ಈ ಸಮೀಕರಣದಂತೆ ಸಂಭಾವ್ಯ ಪ್ಲೇಯಿಂಗ್ ಇಲೆವೆನ್‌ನಲ್ಲಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಜೋಶ್ ಹೇಝಲ್‌ವುಡ್, ಭುವನೇಶ್ವರ್ ಕುಮಾರ್, ರಾಸಿಖ್ ದಾರ್ ಹಾಗೂ ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್) ಸ್ಥಾನ ಪಡೆದಿದ್ದಾರೆ.
ಇದರ ನಡುವೆ ಆರ್‌ಸಿಬಿಗೆ ಸಣ್ಣ ತಲೆನೋವಾಗಿರುವುದು ಫಿಲ್ ಸಾಲ್ಟ್ ಗಾಯ. ಬೆಂಗಳೂರಿನಲ್ಲಿ ಅಭ್ಯಾಸದ ವೇಳೆ ಗಾಯಗೊಂಡಿದ್ದ ಸಾಲ್ಟ್ ಈಗಾಗಲೇ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳಿಂದ ಹೊರಗುಳಿದಿದ್ದರು. ಫಿಟ್‌ನೆಸ್ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಸರಿಯಾಗದ ಕಾರಣ, ಏಪ್ರಿಲ್ 30ರ ಪಂದ್ಯದಲ್ಲೂ ಅವರು ಆಡಲು ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಇದರ ಫಲವಾಗಿ ಜೇಕಬ್ ಬೆಥೆಲ್ ಮತ್ತೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತುಕೊಳ್ಳುವ ನಿರೀಕ್ಷೆ ಇದೆ.