Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

101 ರನ್‌ಗಳ ತಿಲಕ್ ಮ್ಯಾಜಿಕ್ – ಸೋಲಿನ ಸರಪಳಿ ಮುರಿದ ಮುಂಬೈ

ಮುಂಬೈ: Tilak Varma ಅವರ ಸ್ಫೋಟಕ ಶತಕದ ಜೊತೆಗೆ ಬೌಲರ್‌ಗಳ ಅಚ್ಚುಕಟ್ಟಾದ ಪ್ರದರ್ಶನದಿಂದ Mumbai Indians ತಂಡವು ತವರಿನಲ್ಲೇ Gujarat Titans ವಿರುದ್ಧ 99 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ 5 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಗುಜರಾತ್ 15.5 ಓವರ್‌ಗಳಲ್ಲಿ ಕೇವಲ 100 ರನ್‌ಗೆ ಆಲೌಟ್ ಆಯಿತು. ಕೋಲ್ಕತ್ತಾ ವಿರುದ್ಧದ ಗೆಲುವಿನ ಬಳಿಕ ಸತತ ನಾಲ್ಕು ಸೋಲು ಕಂಡಿದ್ದ ಮುಂಬೈ ಇದೀಗ ಉತ್ತಮ ನೆಟ್ ರನ್‌ರೇಟ್ (0.067) ಸಹಿತ 7ನೇ ಸ್ಥಾನಕ್ಕೆ ಏರಿಕೆಯಾಗಿದೆ. ಗುಜರಾತ್ 6ನೇ ಸ್ಥಾನದಲ್ಲೇ ಉಳಿದಿದೆ.

ಗುಜರಾತ್ ಇನ್ನಿಂಗ್ಸ್ ಆರಂಭದಲ್ಲೇ ಕುಸಿತ ಕಂಡಿತು. Jasprit Bumrah ಎಸೆದ ಮೊದಲ ಓವರಿನ ಮೊದಲ ಬಾಲ್‌ನಲ್ಲೇ Sai Sudharsan ವಿಕೆಟ್ ಕಳೆದುಕೊಂಡರು. ಬಳಿಕ Jos Buttler ಅವರನ್ನು Hardik Pandya ಎಲ್‌ಬಿಡಬ್ಲ್ಯುಗೆ ಬಲಿಯಾಗಿಸಿದರು. ನಾಯಕ Shubman Gill 14 ರನ್ ಗಳಿಸಿ ಔಟಾದರು. Washington Sundar (26) ಮತ್ತು Shahrukh Khan (17) ಸ್ವಲ್ಪ ಪ್ರತಿರೋಧ ತೋರಿದರು. ಮುಂಬೈ ಪರ ಅಶ್ವನಿ ಕುಮಾರ್ 4 ವಿಕೆಟ್ ಕಿತ್ತರೆ, ಮಿಚೆಲ್ ಸ್ಯಾಂಟ್ನರ್ ಮತ್ತು ಗಜನ್‌ಫರ್ ತಲಾ 2 ವಿಕೆಟ್ ಪಡೆದರು. ಬುಮ್ರಾ ಹಾಗೂ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಮುಂಬೈ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. 5.5 ಓವರ್‌ಗಳಲ್ಲಿ 44 ರನ್‌ಗೆ 3 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ 4ನೇ ವಿಕೆಟ್‌ಗೆ 37 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟವಾಡಿದರು. ತಿಲಕ್ 22 ಎಸೆತಗಳಲ್ಲಿ 64 ರನ್ ಸಿಡಿಸಿದರೆ, ಪಾಂಡ್ಯ 16 ಎಸೆತಗಳಲ್ಲಿ 15 ರನ್ ಮಾಡಿ ಔಟಾದರು. ಕೊನೆಯಲ್ಲಿ ತಿಲಕ್ ಕೇವಲ 5 ಎಸೆತಗಳಲ್ಲಿ 21 ರನ್ ಸಿಡಿಸಿ ಐಪಿಎಲ್‌ನ ಮೊದಲ ಶತಕ ಪೂರೈಸಿದರು. 33 ಎಸೆತಗಳಲ್ಲಿ ಅರ್ಧಶತಕ ತಲುಪಿದ ಅವರು ಮುಂದಿನ 13 ಎಸೆತಗಳಲ್ಲಿ ಶತಕ ಪೂರೈಸಿ 45 ಎಸೆತಗಳಲ್ಲಿ ಅಜೇಯ 101 ರನ್ (8 ಬೌಂಡರಿ, 7 ಸಿಕ್ಸ್) ಗಳಿಸಿ ಮುಂಬೈ ಜಯಕ್ಕೆ ಹೀರೋ ಆಗಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ